Ad Widget .

ಪಾಣತ್ತೂರು: ಅಂತರಾಜ್ಯ ರಸ್ತೆಯಲ್ಲಿ ಕುಸಿದ ಗುಡ್ಡ; ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಕರ್ನಾಟಕ ಮತ್ತು ಕೇರಳ ಸಂಪರ್ಕ‌ ಕಲ್ಪಿಸುವ ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

Ad Widget . Ad Widget .

ಬಾಟೋಳಿ ಗಡಿ ಪ್ರದೇಶದಿಂದ ಸುಮಾರು 100 ಮೀಟರ್ ಮುಂದೆ ಈ ಘಟನೆ ಸಂಭವಿಸಿದ್ದು ಪಾಣತ್ತೂರು ರಸ್ತೆ ಸಂಚಾರ ಬಂದ್ ಆಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿತಗೊಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದಲ್ಲಿ ಹಿಂದೆಯೂ ಗುಡ್ಡ ಕುಸಿತಗೊಂಡಿದ್ದು, ಸಂಚಾರ ಕಡಿತಗೊಂಡಿತ್ತು.

Ad Widget . Ad Widget .

ರಸ್ತೆಗೆ ಪರ್ಯಾಯ ಮತ್ತು ತಾತ್ಕಾಲಿಕವಾಗಿ ರಂಗತ್ತಮಲೆ ರಸ್ತೆಯನ್ನು ಬಳಸಲು ಪ್ರಯಾಣಿಕರಿಗೆ ಸೂಚಿಸಲಾಗಿದೆ.

Leave a Comment

Your email address will not be published. Required fields are marked *