Ad Widget .

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಇಂದಿನಿಂದ ಚಾಲನೆ ನೀಡಲಿರುವ ರಾಜ್ಯ ಸರ್ಕಾರ |ಯಾವುದೆಲ್ಲ ದಾಖಲೆಗಳು ಅಗತ್ಯ ?|ಇಲ್ಲಿದೆ ನೋಡಿ !!

ಸಮಗ್ರ ನ್ಯೂಸ್: ವಿಧಾನ ಸಭಾ ಚುನಾವನಾ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಗಳ ಪೈಕಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಇಂದಿನಿಂದಲೇ ಅರ್ಜಿ ಶುರುವಾಗಲಿದೆ. ರಾಜ್ಯದ ಮಹಿಳೆಯರು ಎದುರು ನೋಡ್ತಿರೋ ಗೃಹಲಕ್ಷ್ಮಿ ಯೋಜನೆಗೆ ಇಂದು(ಜುಲೈ 19) ಚಾಲನೆ ಸಿಗಲಿದೆ.. ಬೆಂಗಳೂರಿನಲ್ಲಿ ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆದ್ರೆ ಆಗಸ್ಟ್​ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2 ಸಾವಿರ ಹಣ ಜಮೆಯಾಗಲಿದೆ. ಇನ್ನು ಅರ್ಜಿ ಸಲ್ಲಿಸುವುದು ಎಲ್ಲಿ? ಏನೆಲ್ಲ ದಾಖಲೆಗಳು ಬೇಕು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

Ad Widget . Ad Widget .

‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆ ಹೇಗೆ?

Ad Widget . Ad Widget .

‘ಗೃಹಲಕ್ಷ್ಮೀ’ ಯೋಜನೆಯಡಿ ಮನೆ ಯಜಮಾನಿಗೆ ಪ್ರತೀ ತಿಂಗಳು 2 ಸಾವಿರ ರೂ. ಹಣ ಬರಲಿದೆ. ಈ ಯೋಜನೆಯ ಅರ್ಜಿ ಸಲ್ಲಿಕೆ ಎಸ್‌ಎಂಎಸ್‌ ಮೂಲಕ ಆರಂಭವಾಗಲಿದೆ. ಮೊದಲಿಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡ್ಬೇಕು. ಹೀಗೆ ಎಸ್‌ಎಂಎಸ್‌ ಮಾಡುತ್ತಿದ್ದಂತೆಯೇ ಎರಡೇ ಸೆಕೆಂಡ್‌ನಲ್ಲೇ ಇಲಾಖೆಯಿಂದ ನಿಮಗೆ ಮೇಸೇಜ್‌ ಬರಲಿದೆ. ಅದರಲ್ಲಿ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಬರಲಿದೆ. ಅದೇ ದಿನ, ಅದೇ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಮನೆ ಒಡತಿ ಹೆಸರು ಇರೋ ಪಡಿತರ ಕಾರ್ಡ್‌ ಕಡ್ಡಾಯವಾಗಿದ್ದು, ಇದರ ಜತೆ ಮನೆ ಯಜಮಾನಿಯ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಕೂಡಾ ತೆಗೆದುಕೊಂಡು ಹೋಗಬೇಕು. ಇನ್ನು ಮನೆ ಒಡತಿಯ ಪತಿಯ ಆಧಾರ್‌ಕಾರ್ಡ್‌ ಕೂಡಾ ಕಡ್ಡಾಯವಾಗಿದೆ.

ಒಂದು ವೇಳೆ ಪತಿ ತೆರಿಗೆದಾರರಾಗಿದ್ದರೆ ಅಂಥವರ ಅಕೌಂಟ್‌ಗೆ ಹಣ ಬರುವುದಿಲ್ಲ. ಇನ್ನು ಆಧಾರ್‌ಗೆ ಲಿಂಕ್‌ ಆಗಿರೋ ಅಕೌಂಟ್‌ ಬಿಟ್ಟು, ನಿಮ್ಮದೆ ಬೇರೆ ಅಕೌಂಟ್‌ಗೆ ಹಣ ಬೇಕಾದ್ರೆ ಪಾಸ್‌ಬುಕ್‌ನ ಜೆರಾಕ್ಸ್‌ ಪ್ರತಿ ತೆಗೆದುಕೊಂಡು ಹೋಗಬೇಕು. ಗೃಹಲಕ್ಷ್ಮಿಯರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತೆ. ಅಂತೂ ಇಂತೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗ ಗೃಹಲಕ್ಷ್ಮೀ ಯೋಜನೆ ಇಂದಿನಿಂದ ಶುರುವಾಗಲಿದೆ. ಅರ್ಜಿ ಹಾಕಲು ಯಾವುದೇ ಮಧ್ಯವರ್ತಿಗಳ ಮೊರೆಹೋಗುವ ಅಗತ್ಯವಿಲ್ಲ. ಗೊಂದಲವಿದ್ದರೆ 1902 ನಂಬರ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

Leave a Comment

Your email address will not be published. Required fields are marked *