ಮಂಗಳೂರು: ಕಳೆದು ಹೋದ ಚಪ್ಪಲಿ ಹುಡುಕಿ ಕೊಡಲು ಪೊಲೀಸರಿಗೆ ದೂರು ನೀಡಿದ ಭೂಪ!!

ಸಮಗ್ರ ನ್ಯೂಸ್: ಸಭಾಂಗಣದ ಹೊರಗೆ ಇಟ್ಟಿದ್ದ ಚಪ್ಪಲಿ ಕಳವಾದ ಬಗ್ಗೆ 112 ತುರ್ತು ಸ್ಪಂದನಕ್ಕೆ ಕರೆ ಮಾಡಿ ಪೊಲೀಸರಿಂದ ಹುಡುಕಾಟ ಮಾಡಿಸಿದ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Ad Widget ... ..

ಯುವಕನೋರ್ವ ಶರವು ದೇವಸ್ಥಾನ ಸಮೀಪದ ಸಭಾಂಗಣಕ್ಕೆ ಬಂದಿದ್ದ. ಒಳಗೆ ಹೋಗುವಾಗ ತೆಗೆದಿಟ್ಟಿದ್ದ ಚಪ್ಪಲಿ ಹೊರಗೆ ಬರುವಾಗ ಇರಲಿಲ್ಲ.

Ad Widget

ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಕೊನೆಗೆ 112 ಗೆ ಕರೆ ಮಾಡಿದ್ದಾನೆ. ಏನೋ ಗೊಂದಲ ಆಗಿರಬಹುದೆಂದು ಪೊಲೀಸರು ಸ್ಥಳಕ್ಕೆ ಆಗಮಿಸಿದರೆ ಚಪ್ಪಲಿ ಕಳವಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಚಪ್ಪಲಿಗಾಗಿ ಹುಡುಕಾಡಿದರು ಪ್ರಯೋಜನವಾಗಲಿಲ್ಲ.

ಈ ಬಗ್ಗೆ ಯುವಕ ಲಿಖಿತ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ಚಪ್ಪಲಿ ಕಳವಿನ ಬಗ್ಗೆ ಸಿಸಿ ಕೆಮರಾ ದೃಶ್ಯ ಪರಿಶೀಲನೆ ನಡೆಸಲಾಗಿದೆ.

Leave a Comment

Your email address will not be published. Required fields are marked *