Ad Widget .

ಹೀಗೊಂದು ದಾರುಣ ಘಟನೆ|ಮಗನ ಭವಿಷ್ಯಕ್ಕಾಗಿ ಬಸ್ ನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!!

ಸಮಗ್ರ ನ್ಯೂಸ್: ಮಗನ ಶೈಕ್ಷಣಿಕ ಭವಿಷ್ಯಕ್ಕಾಗಿ ತಾಯಿಯೊಬ್ಬಳು ಚಲಿಸುತ್ತಿದ್ದ ಬಸ್ ನ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪಾಪತಿ (45) ಎಂದು ಗುರುತಿಸಲಾಗಿದೆ. ಈಕೆ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಆರ್ಥಿಕ ಅಡಚಣೆಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

Ad Widget . Ad Widget .

45 ವರ್ಷದ ಪಾಪತಿ ಅವರು ಜೂನ್ 28 ರಂದು ವೇಗವಾಗಿ ಬಂದ ಬಸ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು. ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ನೀಡುತ್ತಾರೆ ಎಂದು ಯಾರೋ ತಪ್ಪು ಮಾಹಿತಿ ನೀಡಿದ ಕಾರಣ, ತನ್ನ ಮಗನ ಕಾಲೇಜು ಶುಲ್ಕ ಕಟ್ಟಲು ಹಣ ಮತ್ತು ಆತನ ಭವಿಷ್ಯಕ್ಕೆ ಹಣ ಸಹಾಯವಾಗುತ್ತದೆ ಎಂದು ಇಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.

Ad Widget . Ad Widget .

ಪೊಲೀಸ್ ಮೂಲಗಳ ಪ್ರಕಾರ, ಜೂನ್ 28 ರಂದು ಪಾಪತಿ ಬಸ್ಸಿಗೆ ಅಡ್ಡ ಬರಲು ಯತ್ನಿಸಿದ್ದರು, ಆದರೆ, ಆಕೆಗೆ ಬೈಕ್ ಡಿಕ್ಕಿ ಹೊಡೆದಿದೆ. ಇದಾಗಿ ಸ್ವಲ್ಪ ಸಮಯದ ನಂತರ, ಆಕೆ ರಸ್ತೆ ದಾಟಲು ಪ್ರಯತ್ನಿಸುವಂತೆ ಇನ್ನೊಂದು ಬಸ್ಸಿನ ಮುಂದೆ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ.

ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ಆಕೆಯ ಕುಟುಂಬಕ್ಕೆ 45,000 ರೂ.ಗಳನ್ನು ನೀಡುವುದಾಗಿ ಹೇಳಿ ಯಾರೋ ಮೃತ ಮಹಿಳೆಗೆ ತಪ್ಪಿ ಮಾಹಿತಿ ನೀಡಿದ್ದರು. ತನ್ನ ಮಗನ ಕಾಲೇಜು ಶುಲ್ಕಕ್ಕಾಗಿ ಹಣವನ್ನು ಹೊಂದಿಸಲು ಹೆಣಗಾಡುತ್ತಿದ್ದ ಅವರಿಗೆ ಇದು ದಾರಿಯಾಗಿ ಕಾಣಿಸಿದೆ.

ಅಪಘಾತದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಂತಾಪ ವ್ಯಕ್ತಪಡಿಸಿದ್ದಾರೆ. ತನ್ನ ಮಗನ ಶಿಕ್ಷಣಕ್ಕಾಗಿ ಶುಲ್ಕ ಪಾವತಿಸಲು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ತಾಯಿಯನ್ನು ಪ್ರೇರೇಪಿಸಿದ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *