Ad Widget .

Sports News: ನೊವಾಕ್ ಜೊಕೊವಿಕ್ ಮಣಿಸಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಝ್

ಸಮಗ್ರ ನ್ಯೂಸ್: ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್‌ರನ್ನು ಐದು ಸೆಟ್‌ಗಳ ಪೈಪೋಟಿಯಲ್ಲಿ ರೋಚಕವಾಗಿ ಮಣಿಸಿದ ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್ ಅಲ್ಕರಾಝ್ ಮೊದಲ ಬಾರಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

Ad Widget . Ad Widget .

ರವಿವಾರ ನಡೆದ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಲ್ಕರಾಝ್ ಅವರು ಜೊಕೊವಿಕ್‌ರನ್ನು 1-6, 7-6(6), 6-1, 4-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

Ad Widget . Ad Widget .

ಇದೇ ಮೊದಲ ಬಾರಿ ವಿಂಬಲ್ಡನ್ ಫೈನಲ್‌ನಲ್ಲಿ ಆಡಿದ 21ರ ಹರೆಯದ ಅಲ್ಕರಾಝ್ ಅವರು ಬೋರಿಸ್ ಬೆಕೆರ್ ಹಾಗೂ ಬೋರ್ನ್ ಬೋರ್ಗ್ ನಂತರ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಮೂರನೇ ಕಿರಿಯ ಆಟಗಾರನಾಗಿದ್ದಾರೆ.

ಜೊಕೊವಿಕ್ ಮೊದಲ ಸೆಟನ್ನು 6-1 ಅಂತರದಿಂದ ಗೆದ್ದುಕೊಂಡು ಶುಭಾರಂಭ ಮಾಡಿದರು. ಆದರೆ 2ನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಅಲ್ಕರಾಝ್ ಟೈ-ಬ್ರೇಕರ್‌ನಲ್ಲಿ 7-6(6), ಅಂತರದಿಂದ ಜಯ ಸಾಧಿಸಿ 1-1ರಿಂದ ಸಮಬಲಗೊಳಿಸಿ ಪಂದ್ಯವನ್ನು 3ನೇ ಸೆಟ್‌ಗೆ ಕೊಂಡೊಯ್ದರು. 3ನೇ ಸೆಟ್‌ನಲ್ಲಿ ಅಲ್ಕರಾಝ್ 6-1 ಅಂತರದಿಂದ ಜಯ ಸಾಧಿಸಿ 2-1 ಮುನ್ನಡೆ ಸಾಧಿಸಿದರು.

4ನೇ ಸೆಟ್‌ನಲ್ಲಿ 6-3 ಅಂತರದಿಂದ ಜಯ ಸಾಧಿಸಿದ ಜೊಕೊವಿಕ್ ಪಂದ್ಯವನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ 5ನೇ ಸೆಟ್‌ನಲ್ಲಿ 6-4 ಅಂತರದಿಂದ ಜಯಭೇರಿ ಬಾರಿಸಿದ ಅಲ್ಕರಾಝ್ ಪ್ರಶಸ್ತಿ ಬಾಚಿಕೊಂಡರು.

Leave a Comment

Your email address will not be published. Required fields are marked *