Ad Widget .

ಪಂಜ:ಸರಕಾರಿ ಪ್ರೌಢಶಾಲೆಯಿಂದ ಬ್ಯಾಟರಿಗಳ ಕಳವು

ಸಮಗ್ರ ನ್ಯೂಸ್: ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಬ್ಯಾಟರಿಗಳನ್ನು ಕಳವು ನಡೆಸಲಾಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Ad Widget . Ad Widget .

ಪ್ರೌಢಶಾಲೆ ೨೦೧೦ರಲ್ಲಿ ಇಲಾಖೆಯಿಂದ ಸರಬರಾಜಾದ ಬ್ಯಾಟರಿಗಳು ೨೦೧೩ರಲ್ಲಿ ಅನುಪಯುಕ್ತವಾಗಿದ್ದು, ಈ ಅನುಪಯುಕ್ತ ೨೨ ಲೀಡ್ ಆಸಿಡ್ ಬ್ಯಾಟರಿಗಳನ್ನು ಶಾಲೆಯ ಒಂದು ಕೊಠಡಿಯಲ್ಲಿ ಶೇಖರಿಸಿಡಲಾಗಿತ್ತು. ಜು.೧೫ರಂದು ಬೆಳಗ್ಗೆ ಮುಖ್ಯ ಶಿಕ್ಷಕರು ಕೊಠಡಿ ಪರಿಶೀಲಿಸಿದ ವೇಳೆ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಬ್ಯಾಟರಿಗಳ ಅಂದಾಜು ಮೌಲ್ಯ ಸುಮಾರು ೪೪,೬೦೦ ರೂ. ಗಳಾಗಿರುತ್ತದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *