Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯಶಾಸ್ತ್ರ ಪ್ರಕಾರ ಜುಲೈ 16-22ರವರೆಗಿನ ವಾರ ಭವಿಷ್ಯ ನೋಡುವುದಾದರೆ ಕೆಲವು ರಾಶಿಯವರು ಎಚ್ಚರವಹಿಸಬೇಕು. ಹಲವರ ಜೀವನದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ. ಈ ವಾರ ಯಾವ ರಾಶಿಗೆ ಶುಭ, ಯಾವ ರಾಶಿಯವರಿಗೆ ಲಾಭ ನೋಡೋಣ ಬನ್ನಿ…

Ad Widget . Ad Widget .

ಮೇಷರಾಶಿ:
ವಾರದ ಆರಂಭದಲ್ಲಿ, ಗೆಳೆಯರೊಂದಿಗೆ ಮೋಜು ಅನುಭವಿಸಲು ನಿಮಗೆ ಅವಕಾಶ ಸಿಗಬಹುದು. ಅವರೊಂದಿಗೆ ಎಲ್ಲಾದರೂ ವಾಕ್​​ಗೆ ಹೋಗಲಿದ್ದೀರಿ. ನಿಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ನಿಮ್ಮ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಸಮಸ್ಯೆಗಳನ್ನು ಮರೆತು ಮುಂದೆ ಹೋಗಬೇಕು. ಪ್ರೇಮ ಜೀವನದಲ್ಲಿ ಪ್ರಣಯದ ಜೊತೆಗೆ ನೀವು ವಿವಾದಗಳನ್ನು ಎದುರಿಸಬಹುದು. ಸಿಹಿ-ಕಹಿ ಸನ್ನಿವೇಶ ಎದುರಾಗಬಹುದು. ಕೆಲಸದಲ್ಲಿ ನಿಮ್ಮ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ನೀವು ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬಾರದು. ಯಾವುದೇ ಮಹಿಳೆಯ ವಿರುದ್ಧ ಅವಮಾನಕರ ಪದಗಳನ್ನು ಬಳಸಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ನಿಮ್ಮ ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ನೀವು ಹೊಸ ಲಾಭಗಳನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ ಈ ವಾರ ನೀವು ಕಠಿಣ ಶ್ರಮದ ಜೊತೆಗೆ ಮುಂದುವರಿಯಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು.

Ad Widget . Ad Widget .

ವೃಷಭ ರಾಶಿ
ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಮತ್ತು ಪ್ರಣಯ ಅನುಭವಿಸಲಿದ್ದಾರೆ. ಹೊಸ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಪ್ರೇಮದ ವಿಚಾರದ ಕುರಿತು ಮಾತನಾಡುವುದಾದರೆ ನಿಮ್ಮ ಪ್ರೇಮಿಯೊಂದಿಗೆ ಆಪ್ತತೆಯನ್ನು ಸಾಧಿಸಲಿದ್ದೀರಿ. ಅವರೊಂದಿಗೆ ಉತ್ತಮ ಸಂಬಂಧ ಕಾಪಾಡಲಿದ್ದೀರಿ. ನೀವು ಪರಸ್ಪರ ಸ್ನೇಹದಿಂದ ವರ್ತಿಸಲಿದ್ದೀರಿ. ಇದು ನಿಮ್ಮ ನಡುವಿನ ಸಂಬಂಧವನ್ನು ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ನೀವು ವಿಶೇಷ ಯಶಸ್ಸು ಸಾಧಿಸಲಿದ್ದೀರಿ. ಅಟೋಮೊಬೈಲ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜನರು ಇನ್ನೂ ಹೆಚ್ಚಿನ ಲಾಭ ಗಳಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಲು ಹೊಸ ದಾರಿಗಳನ್ನು ಕಂಡುಹಿಡಿಯಲಿದ್ದಾರೆ. ಇದು ಅವರಿಗೆ ಉತ್ತಮ ಲಾಭ ತಂದು ಕೊಡಲಿದೆ. ನಿಮ್ಮ ಹೊಸ ಕಚೇರಿಯನ್ನು ನೀವು ತೆರೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಅಲ್ಲದೆ ನಿಮ್ಮ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಮಿಥುನ ರಾಶಿ
ಈ ವಾರ ನಿಮಗೆ ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಬಲ ದೊರೆಯಲಿದೆ. ಪರಸ್ಪರ ಅನ್ಯೋನ್ಯತೆ ಬೆಳೆಯಲಿದೆ. ನಿಮ್ಮ ಕೌಟುಂಬಿಕ ಜೀವನವನ್ನು ಇನ್ನಷ್ಟು ಸುಧಾರಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವು ಒದಗಿಸಲಿದ್ದಾರೆ ಹಾಗೂ ನೀವು ಮುಂದೆ ಸಾಗಲು ಪ್ರೇರಣೆ ನೀಡಲಿದ್ದಾರೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನೀವು ನಿಮ್ಮ ಪ್ರಣಯ ಸಂಗಾತಿಗೆ ಮದುವೆಯ ಪ್ರಸ್ತಾವನೆಯನ್ನು ಮುಂದಿಡಬಹುದು. ವಿವಾಹಿತ ವ್ಯಕ್ತಿಗಳು ಮಕ್ಕಳನ್ನು ಪಡೆಯಬಹುದು. ಮಾನಸಿಕ ಒತ್ತಡವನ್ನು ದೂರವಿಡಿ. ಏಕೆಂದರೆ ಇದು ನಿಮ್ಮ ಕೆಲಸದ ಪ್ರಗತಿಗೆ ಹಾನಿಯನ್ನುಂಟು ಮಾಡಬಹುದು. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಹೀಗಾಗಿ ಹೆಚ್ಚು ಪ್ರಯತ್ನ ಪಡದೆ ನಿಮ್ಮ ಕೆಲಸದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಈ ವಾರ ಉದ್ಯೋಗದಲ್ಲಿರುವವರಿಗೆ ಅನುಕೂಲಕರ ಎನಿಸಲಿದೆ. ನಿಮ್ಮ ಅನುಭವ ಮತ್ತು ದಕ್ಷತೆಯ ಸಂಪೂರ್ಣ ಲಾಭವನ್ನು ಪಡೆಯಲಿದ್ದೀರಿ. ಇದು ನಿಮಗೆ ಉದ್ಯೋಗದಲ್ಲಿ ಲಾಭ ಪಡೆಯಲು ಸಹಾಯವಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಲಿದ್ದಾರೆ. ತಜ್ಞರ ಜೊತೆಗೆ ಕೆಲಸ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಅವರ ಸಲಹೆಯು ನಿಮಗೆ ಸಾಕಷ್ಟು ಸಹಾಯ ಮಾಡಲಿದೆ.

ಕರ್ಕಾಟಕ ರಾಶಿ
ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕು ಶಾಂತಿಯುತವಾಗಿ ಮುಂದುವರಿಯಲಿದೆ. ಪರಸ್ಪರರ ನಡುವೆ ಸಾಕಷ್ಟು ಅನ್ಯೋನ್ಯತೆ ಇರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ಸಣ್ಣಪುಟ್ಟ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳಬೇಡಿ. ಇಲ್ಲದಿದ್ದರೆ ಯಾರಾದರೂ ಒಬ್ಬರು ನಿಮ್ಮ ಮಾತಿನ ದುರುಪಯೋಗ ಪಡಿಸಿಕೊಳ್ಳಬಹುದು. ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಸಾಕಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಈ ವೆಚ್ಚಗಳು ನಿಮಗೆ ತೃಪ್ತಿ ತಂದು ಕೊಡಲಿವೆ. ಏಕೆಂದರೆ ಇವೆಲ್ಲವನ್ನು ನೀವು ಒಳ್ಳೆಯ ಉದ್ದೇಶಕ್ಕಾಗಿ ಖರ್ಚು ಮಾಡಲಿದ್ದೀರಿ. ನಿಮ್ಮ ಮನಸ್ಸು ಮತ್ತು ಮೆದುಳು ವೇಗವಾಗಿ ಕೆಲಸ ಮಾಡಲಿವೆ. ಇತರರಿಗೆ ಕಷ್ಟಕರವೆನಿಸುವ ಕೆಲಸವನ್ನು ನೀವು ಸುಲಭವಾಗಿ ಮುಗಿಸಲಿದ್ದೀರಿ. ಇದರೊಂದಿಗೆ ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಎಲ್ಲಾ ಕೆಲಸಗಳು ಸರಿಯಾಗಿ ನಡೆದರೆ ನಿಮ್ಮ ಮನಸ್ಸಿನಲ್ಲಿ ತೃಪ್ತಿ ನೆಲೆಸಲಿದೆ.

ಸಿಂಹ ರಾಶಿ:
ಈ ವಾರ ನಿಮಗೆ ಹೊಸ ಸಂತಸ ನೀಡಲಿದೆ. ವೈವಾಹಿಕ ಬದುಕಿನ ಸಮಸ್ಯೆಗಳು ದೂರಗೊಳ್ಳಲಿವೆ. ಸಂಬಂಧದಲ್ಲಿ ಪ್ರೇಮ ಮತ್ತು ಆಕರ್ಷಣೆಯ ಜೊತೆಗೆ ಪರಸ್ಪರ ಸಮಾನ ಗೌರವ ನೀಡಲು ನೀವು ಯತ್ನಿಸಬೇಕು. ಹೀಗೆ ಮಾಡಿದರೆ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಪ್ರೇಮದ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ನೀವು ಮತ್ತು ನಿಮ್ಮ ಪ್ರೇಮಿಯ ನಡುವೆ ಅನೇಕ ತಪ್ಪು ಗ್ರಹಿಕೆಗಳು ಮನೆ ಮಾಡಬಹುದು. ಇದು ತಿಳಿಗೊಳ್ಳಲು ಸಮಯ ಬೇಕಾದೀತು. ಹೀಗಾಗಿ ಮೆಲ್ಲನೆ ತಾಳ್ಮೆಯಿಂದ ಮುಂದೆ ಸಾಗಿರಿ ಹಾಗೂ ಎಲ್ಲವನ್ನು ಅವರಿಗೆ ವಿವರಿಸಿ. ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಸಂತಸವು ಅರಳಲಿದೆ. ನಿಮ್ಮ ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಹೀಗಾಗಿ ನಿಮ್ಮನ್ನು ಕಾಡುತ್ತಿದ್ದ ದೊಡ್ಡ ಚಿಂತೆಯು ದೂರಗೊಳ್ಳಲಿದೆ. ದೇವರ ಅನುಗ್ರಹದಿಂದಾಗಿ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ಉದ್ಯೋಗಿಗಳು ಸಹ ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದಾರೆ. ನಿಮ್ಮ ಬಾಸ್​​ನ ಸಹಕಾರ ಪಡೆಯಲಿದ್ದೀರಿ. ಈ ವಾರ ವ್ಯವಹಾರಕ್ಕೆ ಅನುಕೂಲಕರ ಎನಿಸಲಿದೆ.

ಕನ್ಯಾ ರಾಶಿ:
ಈ ವಾರ ನಿಮಗೆ ಸವಾಲಿನಿಂದ ಕೂಡಿರಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಒತ್ತಡ ಮತ್ತು ಪ್ರೀತಿಯನ್ನು ಅನುಭವಿಸಲಿದ್ದಾರೆ. ಹೀಗಾಗಿ ನಿಮ್ಮ ಸಂಬಂಧವು ಸಿಹಿಕಹಿ ವಾಗ್ವಾದಗಳ ನಡುವೆ ಮುಂದೆ ಸಾಗಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಧಾರಣ ವಾರ ಎನಿಸಲಿದೆ. ನಿಮ್ಮ ಮನಸ್ಸಿನ ಇಚ್ಛೆಗಳನ್ನು ನಿಮ್ಮ ಪ್ರೇಮಿಗೆ ತಿಳಿಸಬೇಕು. ಅನೇಕ ಜವಾಬ್ದಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ನಿಮ್ಮ ಪಾಲಿಗೆ ಚಿಂತೆಯ ವಿಷಯವೆನಿಸಲಿದೆ. ಹೀಗಾಗಿ ನೀವು ಸ್ವಲ್ಪ ಅಸ್ತವ್ಯಸ್ತವಾಗಿರಬಹುದು. ಅನೇಕ ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸುವುದರಿಂದ ನೀವು ಸಾಕಷ್ಟು ಶಕ್ತಿಯನ್ನು ಖರ್ಚು ಮಾಡಬಹುದು. ನಿಮ್ಮ ಶಕ್ತಿಯನ್ನು ಸಕಾಲಕ್ಕಾಗಿ ಉಳಿಸಿಕೊಳ್ಳುವುದು ಅಗತ್ಯ. ನಿಮ್ಮ ವೆಚ್ಚಗಳ ಮೇಲೆ ನಿಗಾ ಇರಿಸುವುದು ಅಗತ್ಯ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿರುವವರು ಒಂದಲ್ಲ ಒಂದು ಕಾರಣಕ್ಕೆ ಕಠಿಣ ಶ್ರಮ ತೋರುವ ಅನಿವಾರ್ಯತೆ ಉಂಟಾಗಬಹುದು. ಅವರ ಕೆಲಸದಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು, ದೀರ್ಘಕಾಲದಿಂದ ಕಾಯುತ್ತಿದ್ದ ಯಾರಾದರೂ ಪ್ರಮುಖ ವ್ಯಕ್ತಿಯ ಬೆಂಬಲವನ್ನು ಪಡೆಯಲಿದ್ದಾರೆ.

ತುಲಾ ರಾಶಿ:
ಈ ವಾರವನ್ನು ನೀವು ಬಿಡುವಿಲ್ಲದೆ ಕಳೆಯಲಿದ್ದೀರಿ. ವೈವಾಹಿಕ ಬದುಕು ಚೆನ್ನಾಗಿ ಮುಂದುವರಿಯಲಿದೆ. ನೀವು ಪರಸ್ಪರ ಸಂಪೂರ್ಣ ಬೆಂಬಲವನ್ನು ನೀಡಲಿದ್ದೀರಿ. ಈ ವಾರ ಪ್ರೇಮ ಜೀವನವು ಸಿಹಿ-ಕಹಿ ಅನುಭವಗಳಿಂದ ಕೂಡಿರಲಿದೆ. ಸಂಬಂಧದಲ್ಲಿ ಪ್ರೇಮ ಭಾವನೆ ನೆಲೆಸಲಿದೆ. ಆದರೂ ಒಂದಷ್ಟು ವಾಗ್ವಾದಗಳು ಉಂಟಾಗಬಹುದು. ಕೆಲಸದಲ್ಲಿ ನೀವು ಇನ್ನಷ್ಟು ಕಠಿಣ ಶ್ರಮ ಪಡಬೇಕು. ಕೆಲಸದಲ್ಲಿ ಸಾಕಷ್ಟು ಸಕ್ರಿಯತೆಯನ್ನು ನೀವು ತೋರಲಿದ್ದೀರಿ. ನಿಮ್ಮ ಎಲ್ಲ ಕೆಲಸಗಳನ್ನು ಸಕಾಲದಲ್ಲಿ ಮುಗಿಸಲಿದ್ದೀರಿ. ಹೀಗಾಗಿ ನಿಮ್ಮ ವರ್ಚಸ್ಸು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ವಾರದಲ್ಲಿ ದೊಡ್ಡ ಅವಕಾಶವೊಂದನ್ನು ಪಡೆಯಲಿದ್ದಾರೆ. ಒಬ್ಬ ಪ್ರಮುಖ ವ್ಯಕ್ತಿಯನ್ನು ನೀವು ಭೇಟಿಯಾಗಲಿದ್ದೀರಿ. ಅನೇಕ ಆರ್ಥಿಕ ಪ್ರಯೋಜನಗಳನ್ನು ನೀವು ಗಳಿಸಲಿದ್ದೀರಿ. ನೀವು ಆನಂದಿಸಲಿದ್ದು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ ಈ ವಾರವು ಅವರ ಪಾಲಿಗೆ ಸಾಕಷ್ಟು ಏರುಪೇರಿನಿಂದ ಕೂಡಿದೆ. ಆದರೆ ಸಮಯವನ್ನು ಮೀಸಲಿಟ್ಟು ನಿಮ್ಮ ಅಧ್ಯಯನವನ್ನು ಮುಂದಕ್ಕೆ ಕೊಂಡೊಯ್ಯುವ ಅಗತ್ಯವಿದೆ.

ವೃಶ್ಚಿಕ ರಾಶಿ:
ಈ ವಾರ ನಿಮ್ಮ ಪಾಲಿಗೆ ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಅತ್ತೆ ಮಾವಂದಿರನ್ನು ಭೇಟಿಯಾಗುವ ಅವಕಾಶ ನಿಮಗೆ ದೊರೆಯಲಿದೆ. ಕೌಟುಂಬಿಕ ಜೀವನದ ಕುರಿತು ಮಾತನಾಡುವುದಾದರೆ ನಿಮ್ಮ ಕೆಲಸದ ಕುರಿತು ಜೀವನ ಸಂಗಾತಿಯು ಸ್ವಲ್ಪ ಚಿಂತೆಗೀಡಾಗಬಹುದು. ಹೀಗಾಗಿ ನಿಮ್ಮ ನಡುವೆ ಒಂದಷ್ಟು ವಾಗ್ವಾದ ಉಂಟಾಗಬಹುದು. ಆದರೆ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅಷ್ಟೊಂದು ಅನುಕೂಲಕರವಾಗಿಲ್ಲ. ನಿಮ್ಮ ಪ್ರೇಮಿಯನ್ನು ಭೇಟಿ ಮಾಡುವ ವಿಚಾರದಲ್ಲಿ ನಿಮಗೆ ಒಂದಷ್ಟು ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ನೀವು ಚಿಂತೆಗೀಡಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಯೋಜನೆಗಳ ಕುರಿತು ಇನ್ನಷ್ಟು ಯೋಚಿಸಬೇಕು. ಇಲ್ಲದಿದ್ದರೆ ನಿಮ್ಮ ಯೋಜನೆಗಳು ಬಾಕಿ ಉಳಿಯಬಹುದು. ಉದ್ಯೋಗಿಗಳ ಪಾಲಿಗೆ ಸಮಯವು ಚೆನ್ನಾಗಿದೆ. ನಿಮ್ಮೆಲ್ಲ ಕೆಲಸವನ್ನು ನೀವು ದೃಢತೆಯಿಂದ ಮುಗಿಸಲಿದ್ದೀರಿ. ಅಲ್ಲದೆ ನಿಯೋಜಿತ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಮುಗಿಸಲಿದ್ದೀರಿ. ನಿಮ್ಮ ಬಾಸ್‌ ಕೂಡಾ ನಿಮ್ಮ ದಕ್ಷತೆಯಿಂದ ಪ್ರಭಾವಿತರಾಗಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ.

ಧನು ರಾಶಿ:
ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ಮಕ್ಕಳಿಂದ ಸಂತಸ ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವು ಎಂದಿನಂತೆ ಮುಂದುವರಿಯಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಹೆಚ್ಚು ವಾದ ಮಾಡಬೇಡಿ. ಪ್ರೇಮ ಜೀವನಕ್ಕೆ ಸಮಯವು ಚೆನ್ನಾಗಿದೆ. ಆದರೆ ನಿಮಗೆ ವೈಯಕ್ತಿಕ ಬದುಕಿನ ಅಗತ್ಯವೂ ಇದೆ ಎಂಬುದನ್ನು ನಿಮ್ಮ ಪ್ರೇಮಿಯು ಅರ್ಥ ಮಾಡಿಕೊಳ್ಳಬೇಕು. ಹೆಚ್ಚುವರಿ ಹಸ್ತಕ್ಷೇಪವು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ನಿಮ್ಮನ್ನು ನಂಬಿರಿ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ. ಪರಸ್ಪರ ಸಾಮರಸ್ಯ ಇದ್ದಲ್ಲಿ ಕೌಟುಂಬಿಕ ವಾತಾವರಣವು ಸಹ ಚೆನ್ನಾಗಿರುತ್ತದೆ. ವ್ಯವಹಾರದಲ್ಲಿ ನಿಮಗೆ ಗೆಳೆಯರ ಬೆಂಬಲ ದೊರೆಯಲಿದೆ. ಇದರಿಂದಾಗಿ ನಿಮ್ಮ ವ್ಯವಹಾರವು ಚೆನ್ನಾಗಿ ಮುಂದುವರಿಯಲಿದೆ. ಆದಾಯದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ನೀವು ಎಲ್ಲಿಂದಾದರೂ ದೊಡ್ಡದಾದ ಲಾಭವನ್ನು ಪಡೆಯಲಿದ್ದೀರಿ. ಹಠಾತ್ ಲಾಭಗಳಿಂದ ನೀವು ಉಬ್ಬಿಕೊಳ್ಳುವುದಿಲ್ಲ. ಉದ್ಯೋಗದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ಹೀಗಾಗಿ ಹೆಚ್ಚು ಗಮನ ನೀಡಿ ಕೆಲಸ ಮಾಡುವುದು ಒಳ್ಳೆಯದು. ಈಗ ನಿಮ್ಮ ವೆಚ್ಚಗಳು ನಿಯಂತ್ರಣದಲ್ಲಿರುತ್ತವೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ.

ಮಕರ ರಾಶಿ:
ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಕುಟುಂಬದಲ್ಲಿ ಯಾರಾದರೂ ವ್ಯಕ್ತಿಯ ವಿವಾಹ ಉಂಟಾಗಬಹುದು. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಕೌಟುಂಬಿಕ ಬದುಕಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯ ನೆಲೆಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಕಟ ಸಂಬಂಧದಲ್ಲಿ ವೃದ್ಧಿ ಉಂಟಾಗಲಿದೆ. ಆರ್ಥಿಕವಾಗಿ ಈ ವಾರವು ಮಿಶ್ರ ಫಲಿತಾಂಶವನ್ನು ತರಬಹುದು. ಇನ್ನೊಂದೆಡೆ, ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಆದಾಯದ ಹೆಚ್ಚಳದ ಕಾರಣ ಸಂತಸ ನೆಲೆಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ನಿರಾಳತೆ ಅನುಭವಿಸಲಿದ್ದಾರೆ. ನೀವು ಉತ್ತಮ ಪರಿಸ್ಥಿತಿಯಲ್ಲಿರಲಿದ್ದು, ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯವು ಅನುಕೂಲಕರವಾಗಿದೆ. ಹೀಗಾಗಿ ಇದರ ಸಂಪೂರ್ಣ ಲಾಭವನ್ನು ಪಡೆಯಿರಿ. ನೀವು ಹೊಸ ಡೀಲನ್ನು ಮಾಡಬಹುದು.

ಕುಂಭ ರಾಶಿ:
ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ನಿಮಗೆ ಅನುಕೂಲಕರ ಎನಿಸಲಿದೆ. ನಿಮ್ಮ ಜವಾಬ್ದಾರಿಗಳನ್ನು ನೀವು ಚೆನ್ನಾಗಿ ನಿಭಾಯಿಸಲಿದ್ದೀರಿ. ಮಕ್ಕಳ ಕುರಿತ ಚಿಂತೆಯು ಕೊನೆಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಮಾನಸಿಕ ಚಿಂತೆಗಳನ್ನು ದೂರ ಮಾಡಲು ಒಟ್ಟಿಗೆ ಕುಳಿತು ಮಾತನಾಡಬೇಕು. ಆಗ ಮಾತ್ರವೇ ಮನಸ್ಸಿಗೆ ಶಾಂತಿ ಲಭಿಸಲಿದೆ. ಈ ವಾರದಲ್ಲಿ ನಿಮ್ಮ ಸಂಬಂಧದಲ್ಲಿ ಸಂತಸ ಪಡೆಯಲಿದ್ದೀರಿ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ನಿರ್ಧರಿಸಲಿದ್ದೀರಿ. ವ್ಯವಹಾರದಲ್ಲಿ ಒಳ್ಳೆಯ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಮತ್ತು ಯಶಸ್ಸನ್ನು ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ.

ಮೀನ ರಾಶಿ:
ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿರುವವರು ಸಂತಸದ ಕ್ಷಣಗಳನ್ನು ಆನಂದಿಸಲಿದ್ದಾರೆ. ನಿಮ್ಮ ಪ್ರೇಮ ಸಂಗಾತಿಯನ್ನು ಸಂತುಷ್ಟಪಡಿಸುವುದಕ್ಕಾಗಿ ನೀವು ಅವರಿಗೆ ಒಳ್ಳೆಯ ಉಡುಗೊರೆಯನ್ನು ನೀಡಲಿದ್ದೀರಿ. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ನೀವು ಪೂರ್ಣಗೊಳಿಸಲಿದ್ದೀರಿ. ಮನಸ್ಸಿನಲ್ಲಿ ಸಂತಸ ಇರಲಿದೆ. ಎಲ್ಲರೊಂದಿಗೆ ಬೆರೆತು ಮಾತನಾಡಲಿದ್ದೀರಿ. ನಿಮ್ಮ ಗೆಳೆಯರ ಜೊತೆ ಮೋಜು ಅನುಭವಿಸಲು ನಿಮಗೆ ಅವಕಾಶ ಸಿಗಬಹುದು. ಪರಸ್ಪರ ಸಂಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ಕೌಟುಂಬಿಕ ಬದುಕಿಗೆ ಗಮನ ನೀಡಿ ನಿಮ್ಮ ಜೀವನ ಸಂಗಾತಿಯನ್ನು ಸಂತುಷ್ಟಪಡಿಸಬೇಕು. ಈ ವಾರದ ಆರಂಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಹಣ ಗಳಿಸಲು ನೀವು ಸಂಪೂರ್ಣ ಗಮನವನ್ನು ನೀಡಬೇಕು. ಈ ಸಮಯದಲ್ಲಿ ನಿಮ್ಮ ಬ್ಯಾಂಕ್‌ ಮೊತ್ತದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ಆದರೆ ನಿಮ್ಮ ಎದುರಾಳಿಗಳ ಕುರಿತು ಒಂದಷ್ಟು ಎಚ್ಚರಿಕೆ ವಹಿಸಿ. ವ್ಯಾಪಾರಿಗಳು ತಮ್ಮ ಸ್ವಂತ ವ್ಯವಹಾರದ ಕುರಿತು ಗಮನ ನೀಡಬೇಕು. ತೆರಿಗೆ ತಪ್ಪಿಸಲು ಯತ್ನಿಸಬೇಡಿ.

Leave a Comment

Your email address will not be published. Required fields are marked *