ಸುಂಟಿಕೊಪ್ಪ: ಶುದ್ಧ ನೀರಿನ ಘಟಕ ಉದ್ಘಾಟಿಸಿದ ಡಾ. ಮಂತರ್ ಗೌಡ

ಸಮಗ್ರ ನ್ಯೂಸ್:‌ ಸುಂಟಿಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ ಮಾದಾಪುರ ರಸ್ತೆಯಲ್ಲಿರುವ ಜಿ.ಎಂ.ಪಿ. ಶಾಲಾ ಮೈದಾನದ ತಡೆಗೋಡೆ ಬದಿಯಲ್ಲಿ ನಿರ್ಮಿಸಿರುವ ನೂತನ ಶುದ್ಧ ನೀರಿನ ಘಟಕವನ್ನು ಶಾಸಕರಾದ ಡಾ. ಮಂತರ್ ಗೌಡ ಅವರು ಉದ್ಘಾಟಿಸಿದರು.

Ad Widget ... ..

ಪಂಚಾಯತಿ ಅಧ್ಯಕ್ಷರಾದ ಶಿವಮ್ಮ ಮಹೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಿ. ಹೆಚ್. ವೇಣುಗೋಪಾಲ್ ಹಾಗೂ ಸದಸ್ಯರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ಡ್ರಮ್ ವಿತರಣೆ: ನಂತರ ಮೇಲಿನ ಪನ್ಯ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತಿಯ ಶೇ.25ರ ನಿಧಿಯಲ್ಲಿ ಶಾಸಕರಾದ ಡಾ: ಮಂತರ್ ಗೌಡ ಅವರು ಉಲುಗುಲಿ 1ನೇ ವಾರ್ಡಿನ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಕುಡಿಯುವ ನೀರು ಸಂಗ್ರಹದ ಡ್ರಮ್ ಗಳನ್ನು ವಿತರಿಸಿದರು.

Ad Widget

Leave a Comment

Your email address will not be published. Required fields are marked *