Ad Widget .

ಚೆಂಬು: ಸಹೋದರನಿಗೆ ಚೂರಿ ಇರಿತ ಪ್ರಕರಣ|ಆರೋಪಿಗಳು ಸೆರೆ

ಸಮಗ್ರ ನ್ಯೂಸ್:‌ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಆಸ್ತಿ ವಿವಾದಕ್ಕೆ ಸಹೋದರನಿಗೆ ಚೂರಿ ಇರಿದ ನಾಪತ್ತೆಯಾಗಿದ್ದ ಆರೋಪಿಗಳು ಕೇರಳದಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

Ad Widget . Ad Widget .

ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಕೊಲೆಯಾದ ಉಸ್ಮಾನ್ ಹಾಗೂ ಅವರ ಸಹೋದರರು ಹತ್ಯೆ ಆರೋಪಿಗಾಳಾಗಿದ್ದ ಸತ್ತಾರ್ ಮತ್ತು ರಫೀಕ್ ರವರು ಚೂರಿಯಿಂದ ಇರಿದು ರಿಕ್ಷಾದಲ್ಲಿ ಪರಾರಿಯಾಗಿದ್ದರು. ಘಟನೆಗೆ ಸಂಭಂದಿಸಿ ಸಹಕರಿಸಿದ ರಿಕ್ಷಾ ಚಾಲಕನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು, ಆದರೆ ಆರೋಪಿಗಳು ನಾಪತ್ತೆಯಾಗಿದ್ದರೂ ಪೋಲಿಸರು ಆರೋಪಿಗಳ ಜಾಡು ಹಿಡಿದು ಶೋಧಕಾರ್ಯ ನಡೆಸಿದ್ದಾರೆ. ಬಳಿಕ ಆರೋಪಿಗಳು ಕೇರಳ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿತ್ತು ಈ ಹಿನ್ನಲೆ ತೀವ್ರ ಕಾರ್ಯಚರಣೆ ನಡೆಸಿದ ಪೋಲಿಸರು ಆರೋಪಿಗಳನ್ನು ಎರ್ನಾಕುಳಂ ಎಂಬಲ್ಲಿ ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

Ad Widget . Ad Widget .

ಘಟನೆ ನಡೆದ ಬಳಿಕ ಆರೋಪಿಗಳ ಮನೆಯವರ ಪೋನ್ ಆಲಿಕೆ ನಡೆಸುತ್ತಿದ್ದ ಸೈಬರ್ ಪೋಲಿಸರು ಆರೋಪಿಗಳು ತನ್ನ ಮನೆಯವರ ಜೊತೆ ಸಂಪರ್ಕಿಸುತ್ತಿದ್ದ ಜಾಡು ಹಿಡಿದು ಆರೋಪಿಗಳನ್ನು ಪತ್ತೆಗೆ ಕಾರ್ಯಾಚರಣೆ ನಡೆಸಿರಬಹುದು ಎನ್ನಲಾಗಿದೆ ಇನ್ನಷ್ಟು ಮಾಹಿತಿ ಪೋಲಿಸರಿಂದಲೇ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *