Ad Widget .

ಬ್ರಹ್ಮಾವರ: ಬೈಕಿನಿಂದ ಬಿದ್ದು ಗ್ರಂಥಪಾಲಕಿ ಮೃತ್ಯು

ಸಮಗ್ರ ನ್ಯೂಸ್: ಬೈಕಿನಿಂದ ಬಿದ್ದು ಹಿಂಬದಿ ಸವಾರೆಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ- ಬ್ರಹ್ಮಾವರ ರಸ್ತೆಯ ಕೊಳಂಬೆ ಎಂಬಲ್ಲಿ ಸಂಭವಿಸಿದೆ.

Ad Widget . Ad Widget .

ಮೃತರನ್ನು ಕೋಟೇಶ್ವರ ನಿವಾಸಿ, ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಲೈಬ್ರೆರಿಯನ್ ಶಾಂಭವಿ ಪಿ.(59) ಎಂದು ಗುರುತಿಸಲಾಗಿದೆ.

Ad Widget . Ad Widget .

ಕಾಲೇಜು ಬಿಟ್ಟ ನಂತರ ಇವರು ಕಾಲೇಜಿನ ಲ್ಯಾಬ್ ಟೆಕ್ನಿಷಿಯನ್ ಸುಧೀಂದ್ರ ಎಂಬವರ ಬೈಕಿ ನಲ್ಲಿ ಬ್ರಹ್ಮಾವರದ ಬಸ್ ನಿಲ್ದಾಣದವರೆಗೆ ಹೊರಟಿದ್ದರು. ಕೊಳಂಬೆ ಬಳಿ ಬರುವಾಗ ಜೋರಾಗಿ ಮಳೆ ಬಂದುಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *