Ad Widget .

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಮೊಹಮ್ಮದ್ ಹಾಜಿ ಅವರ 50ನೇ ಪುಣ್ಯಸ್ಮರಣೆ

ಸಮಗ್ರ ನ್ಯಸ್:ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಮೊಹಮ್ಮದ್ ಹಾಜಿ ಅವರ 50ನೇ ವರ್ಷದ ಪುಣ್ಯಸ್ಮರಣೆ, ಪ್ರಶಸ್ತಿ ಪ್ರಧಾನ ಮತ್ತು 50 ಕಾರ್ಯಕ್ರಮಗಳಿಗೆ ಚಾಲನಾ ಕಾರ್ಯಕ್ರಮ ಜು.23 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ.

Ad Widget . Ad Widget .
ತೆಕ್ಕಿಲ್ ಮೊಹಮ್ಮದ್ ಹಾಜಿ

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಮ್. ಶಹೀದ್ ಕಳೆದ ನೂರು ವರ್ಷಗಳಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ, ಅರಂತೋಡು ಸಹಿತ ಕರ್ನಾಟಕ ಕೇರಳ ಮತ್ತು ಇತರ ವಿವಿಧ ಭಾಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ, ಅವಿಭಕ್ತ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಉದ್ಯಮಿಯಾಗಿ, ಸಮಾಜ ಸೇವಕರಾಗಿ ಅನೇಕ ಮಸೀದಿ ಮತ್ತು ಮದರಸ ಶಾಲೆಗಳ ವಿವಿಧ ಸ್ಥಾಪಕರಾಗಿ ಕಾರ್ಯನಿರ್ವಹಿಸಿದವರು. ಸರಕು-ಸಾರಿಗೆ, ಮರದ ವ್ಯಾಪಾರಿಯಾಗಿ, ಗುಟ್ಟಿಗೆದಾರರಾಗಿ, ಮಾದರಿ ತೋಟಗಾರಿಕೆ ಕೃಷಿಕರಾಗ, ಜಮೀನುದಾರರಾಗಿ ಊರಿನ ಅಭಿವೃದ್ಧಿಯ ಹರಿಕಾರ ವಿವಿಧ ಕ್ಷೇತ್ರದ ಪರಿಣಿತರನ್ನು ಈ ಭಾಗಕ್ಕೆ ಕರೆತಂದ ಹಿರಿಯ ಆದರ್ಶ ವ್ಯಕ್ತಿತ್ವದ ಜಾತ್ಯತೀತ ಪರಮತ ಸಹಿಷ್ಣು ಆದರ್ಶ ವ್ಯಕ್ತಿ ಮರ್ ಹೂಮ್ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕರ್ನಾಟಕ ಸರ್ಕಾರದ ವಿಧಾನಸೌಧದ ಮಾನ್ಯ ಸಭಾಪತಿಗಳಾದ ಯು.ಟಿ. ಖಾದರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದೆ.

Ad Widget . Ad Widget .

ಕಾರ್ಯಕ್ರಮದಲ್ಲಿ ಕುಟುಂಬ ಸಮ್ಮಿಲನ, ಸಾಧಕರಿಗೆ ಸನ್ಮಾನ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದೆ. ಈ ಸಮಾರಂಭದಲ್ಲಿ ಕೇರಳ, ಕರ್ನಾಟಕ ರಾಜ್ಯದ ಸಚಿವರುಗಳು ವಿವಿಧ ಧಾರ್ಮಿಕ ರಾಜಕೀಯ ಸಾಮಾಜಿಕ ಮುಖಂಡರುಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಭಾಗವಹಿಸಳಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನವನ್ನು ಜ|ಅಹಮ್ಮದ್ ದೇವರಕೋವಿಲ್ ನೆರವೇರಿಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಕರ್ನಾಟಕ ಲೋಕಸಭಾ ಆಯೋಗದ ಮಾಜಿ ಅಧ್ಯಕ್ಷರು ಶ್ಯಾಮ್ ಭಟ್ ಮಾಡಲಿದ್ದಾರೆ. ಲಯನ್ ಎಂ.ಬಿ. ಸದಾಶಿವ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಟಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಚೊಕ್ಕಾಡಿ, ಅಬ್ದುಲ್ ಖಾದರ್ ಪಟೇಲ್, ಉನೈಸ್ ಪೆರಾಜೆ, ಸಿದ್ದಿಕ್ ಕೊಕ್ಕೊ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *