Ad Widget .

ಸುಳ್ಯ: ಪದೋನ್ನತಿಗೊಂಡು ವರ್ಗಾವಣೆಯಾದ ಸಿಡಿಪಿಒ ರಶ್ಮಿಗೆ ಬೀಳ್ಕೊಡುಗೆ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹಿರಿಯ ಸಹಾಯಕ ನಿರ್ದೇಶಕರಾಗಿ ಪದೋನ್ನತಿಗೊಂಡ ರಶ್ಮಿ ಅಶೋಕ್ ‌ನೆಕ್ರಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಜು.15 ರಂದು ಸುಳ್ಯದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.

Ad Widget . Ad Widget .

ಕಾರ್ಯಕ್ರಮದ ಅಧ್ಯಕ್ಷತೆ ಸಿಡಿಪಿಒ ಶೈಲಜಾ ದಿನೇಶ್ ವಹಿಸಿದ್ದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ರವರು ರಶ್ಮಿ ಅಶೋಕ್ ‌ನೆಕ್ರಾಜೆಯವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಿಡಿಪಿಒ ‌ಕಚೇರಿ‌ ವತಿಯಿಂದ ಸಹೋದ್ಯೋಗಿಗಳು ಮಡಿಲು ತುಂಬಿಸಿ ಬೀಳ್ಕೊಟ್ಟರು. ರಶ್ಮಿಯವರ‌ ಪತಿ ಅಶೋಕ್‌ ನೆಕ್ರಾಜೆಯವರ ಹುಟ್ಟುಹಬ್ಬವನ್ನು‌ ಕೂಡಾ ಆಚರಿಸಲಾಯಿತು.

Ad Widget . Ad Widget .

ಪಶುಸಂಗೋಪನೆ ಇಲಾಖೆಯ‌ ಮುಖ್ಯ‌ ವೈದ್ಯಾಧಿಕಾರಿ ಡಾ.ನಿತೀನ್ ಪ್ರಭು, ಸುಳ್ಯ‌ ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್, ಸುಳ್ಯ ಸರಕಾರಿ ಪದವಿ ಪೂರ್ವ ‌ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ತಾಲೂಕು ಪಂಚಾಯತ್ ‌ಮಾಜಿ ಸದಸ್ಯ ಅಶೋಕ್ ‌ನೆಕ್ರಾಜೆ, ಸುಳ್ಯದ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಹರಿಣಿ ಸದಾಶಿವ ವೇದಿಕೆಯಲ್ಲಿದ್ದರು.

Leave a Comment

Your email address will not be published. Required fields are marked *