Ad Widget .

ವಿರಾಜಪೇಟೆ: ಮಾನವೀಯ ನೆಲೆಯಲ್ಲಿ ಆಸ್ಪತ್ರೆಗೆ ಹೊದಿಕೆ ದಾನ ನೀಡಿದ ಸಮಾಜ ಸೇವಕ ಕೆ.ಎ ಕುಶಲಪ್ಪ

ಸಮಗ್ರ ನ್ಯೂಸ್:‌ ಮಾನವೀಯ ಗುಣಗಳನ್ನು ಹೊಂದಿರುವವರು ಹಣದ ಮೌಲ್ಯ ನಿರ್ಣಯ ಮಾಡುವುದಿಲ್ಲ. ಪರರಿಗೆ ಉಪಯುಕ್ತವಾಗುವ ಕಾರ್ಯವನ್ನು ತೆರೆಯ ಹಿಂದೆ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಂತೆ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಉಚಿತವಾಗಿ ಹೊದಿಕೆಗಳನ್ನು ನೀಡಿದ್ದಾರೆ.

Ad Widget . Ad Widget .

ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಪಟ್ಟಣದ ಆರ್.ಐ.ಹೆಚ್.ಪಿ. ಆಸ್ಪತ್ರೆಗೆ ರಿ ಬಿಲ್ಡ್ ಕೊಡಗು ಸಂಸ್ಥಾಪಕರಾದ ಕೆ.ಎ. ಕುಶಾಲಪ್ಪ ಅವರು ತನ್ನ ತಂದೆಯಾದ ದಿವಂಗತ ಕೆ.ಪಿ. ಅಯ್ಯಪ್ಪ ಹೆಸರಿನಲ್ಲಿ ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಅರವತ್ತು ಹೊದಿಕೆಗಳನ್ನು ಉಚಿತವಾಗಿ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಕೊಡಗು ಸಂಸ್ಥೆಯ ಸಂಸ್ಥಾಪಕರಾದ ಕುಶಾಲಪ್ಪ ಅಯ್ಯಪ್ಪ ಅವರು ಇಂದು ಆಸ್ಪತ್ರೆ ಯ ಮುಖ್ಯ ಶಸ್ತ್ರಚಿಕಿತ್ಸಾಕರು ಹಾಗೂ ಮುಖ್ಯಾಧಿಕಾರಿಗಳಾದ ಡಾ.ಚಂದ್ರು ಅವರುಗಳಿಗೆ ಹೊದಿಕೆಗಳನ್ನು ಹಸ್ತಾಂತರ ಮಾಡಿದರು. ಆರ್.ಐ.ಹೆಚ್.ಪಿ. ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ರಿ ಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕರಾದ ಕುಶಾಲಪ್ಪ ಅವರು ಮಾತನಾಡಿ ಇಂದು ನನ್ನ ತಂದೆಯ ಜನ್ಮ ದಿನವಾಗಿದ್ದು ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ ಸಮಾಜಿಕ ಕಳಕಳಿಯ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಕೊರತೆ ಕಾಣಿಸಿದ ರೋಗಿಗಳಿಗೆ ಉಪಯುಕ್ತ ವಾಗುವಂತೆ ಹೊದಿಕೆಗಳನ್ನು ಉಚಿತವಾಗಿ ನೀಡಿದ್ದೇನೆ. ಇದರ ಸದುಪಯೋಗವಾಗಬೇಕು ಎಂದು ಹೇಳಿದರು.

Ad Widget . Ad Widget .

ಡಾ. ಚಂದ್ರು ಅವರು ಮಾತನಾಡಿ. ದಾನಿಗಳ ನೆರವಿನಿಂದ ಮಾನವೀಯ ನೆಲೆಯಲ್ಲಿ ಸರ್ವರು ಸಹಕರಿಸಿದಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಅಲ್ಲದೇ ಇಲ್ಲಿಗೆ ಬರುವ ಬಹುತೇಕ ರೋಗಿಗಳು ಕಡು ಬಡತನದ ಬವಣೆಯಲ್ಲಿ ಬರುವುದಾಗಿದೆ. ಧಾನಿಗಳು ಮನಗಂಡು ಸಹಕರಿಸಿದಲ್ಲಿ ಉತ್ತಮ ಚಿಕಿತ್ಸೆಯನ್ನು ಹಾಗೂ ಸೌಲಭ್ಯಗಳನ್ನು ಒದಗಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ರಿ ಬಿಲ್ಡ್ ಸಂಸ್ಥೆಯ ಸಂಚಾಲಕರಾದ ಪಾಲಂದಿರ ರಾಧ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು ,ಸಿಬ್ಬಂದಿಗಳು ಹಾಜರಿದ್ದರು.

Leave a Comment

Your email address will not be published. Required fields are marked *