ಸಮಗ್ರ ನ್ಯೂಸ್: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ಕಸಬಾ ಗ್ರಾಮದ ಗಾಂಧಿನಗರದ ನಾವೂರು ನಿವಾಸಿ ಅಬ್ದುಲ್ ನಾಜೀರ್ (31) ಈ ಬಗ್ಗೆ ದೂರು ನೀಡಿದ್ದಾರೆ. ಅಬ್ದುಲ್ ನಾಜೀರ್ ಆರೋಪಿ ಶಾಬೀತ್ ಎಂಬವರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊಗರ್ಪಣೆ, ಹಳೆಗೇಟು ಎಂಬಲ್ಲಿ ಆಟೋ ಕ್ಯಾರ್ ಎಂಬ ಸರ್ವಿಸ್ ಸ್ಟೇಷನ್ ಅನ್ನು ಪಾರ್ಟನರ್ ಶೀಫ್ ನಲ್ಲಿ ವ್ಯವಹಾರ ನಡೆಸುತ್ತಿದ್ದು, ತಮ್ಮ ವ್ಯವಹಾರದಲ್ಲಿ ತಮ್ಮೊಳಗೆ ತಕರಾರು ಬಂದ ಕಾರಣ ವ್ಯಾವಹಾರಕ್ಕೆಂದು 4,50,000/- ಹಣವನ್ನು ನೀಡಿದ್ದ ಶಾಬೀತ್ ನನ್ನು ಅಬ್ದುಲ್ ನಾಜೀರ್ ವ್ಯವಹಾರದಿಂದ ಬಿಡಲು ನಿರ್ಧಾರಿಸಿ ಆತನು ನೀಡಿದ ಹಣದಲ್ಲಿ 3,10,000/- ಹಣವನ್ನು ಶಾಬೀತ್ ನಿಗೆ ನೀಡಿದ್ದು, ಉಳಿದ 1,40,000/- ಹಣ ನೀಡಲು ಬಾಕಿ ಇರುತ್ತದೆ.
ಶಾಬೀತನು ಜು.12ರಂದು ಅಬ್ದುಲ್ ನಾಜೀರ್ ಅವರ ಸರ್ವಿಸ್ ಸ್ಟೇಷನ್ ಗೆ ಅಪರಿಚಿತ 5 ಜನರನ್ನು ಕೆಎ 02 ಎಂಕೆ 2654 ನೇ ಐ-20 ಕಾರಿನಲ್ಲಿ ಕರೆದುಕೊಂಡು ಬಂದು ಸರ್ವಿಸ್ ಸ್ಟೇಷನ್ ಒಳಗೆ ಏಕಾಏಕಿಯಾಗಿ ನುಗ್ಗಿ ನಾಜೀರ್ ನ್ನು ಸುತ್ತುವರೆದು ಅಪರಿಚಿತ ವ್ಯಕ್ತಿಗಳಲ್ಲಿ ಒಬ್ಬಾತನು ಬ್ಯಾರಿ ಭಾಷೆಯಲ್ಲಿ “ ಪೈಸೆ ಇಡ್ ಇಲ್ಲಾಂಗ್ ನಿನ್ನ ಕೊಂದ್ ಪೊಯಿ” ಎಂದಾಗ ಅಬ್ದುಲ್ ನಾಜೀರ್ ಈಗ ನನಗೆ ಹಣ ರಡಿ ಮಾಡಲು ಆಗುವುದಿಲ್ಲ ಸ್ವಲ್ಪ ಟೈಮ್ ಬೇಕು ಎಂದಾಗ ಎಲ್ಲಾ ಆರೋಪಿಗಳು ಸೇರಿ ಅಬ್ದುಲ್ ನಾಜೀರ್ ಗೆ ಆರೋಪಿಗಳು ಬಂದ ಕಾರಿನಲ್ಲಿ ಕುಳ್ಳಿರಿಸಲು ಕೈ ಹಿಡಿದು ಎಳೆದಾಗ ಅವರಿಂದ ತಪ್ಪಿಸಲು ಉರುಳಾಡಿದ್ದು, ಆಗ ಆರೋಪಿಗಳ ಪೈಕಿ ಒಬ್ಬತನು ಮರದ ತುಂಡಿನಿಂದ ಹೊಟ್ಟೆಗೆ ಹೊಡೆದಿದ್ದು, ಇನ್ನೊಬ್ಬ ವ್ಯಕ್ತಿ ಕಬ್ಬಿಣದ ರಾಡಿನಿಂದ ಹೊಡೆಯಲು ಪ್ರಯತ್ನಿಸಿದ್ದಾನೆ.
ಉಳಿದರವರು ಕೆನ್ನೆಗೆ, ಬೆನ್ನಿಗೆ, ಎದೆಗೆ ಹೊಡೆದು ತಲೆಯ ಕೂದಲನ್ನು ಹಿಡಿದು ಗೋಡೆಗೆ ಹೊಡೆಯಲು ಪ್ರಯತ್ನಿಸಿ ನಂತರ ಈ ಬಗ್ಗೆ ದೂರು ನೀಡಿದರೆ ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಉಪಯೋಗಿಸಿದ ಮರದ ತುಂಡು ಹಾಗೂ ಕಬ್ಬಿಣದ ರಾಡನ್ನು ಅಲ್ಲೆಯೇ ಬಿಟ್ಟು ಅವರು ಬಂದ ಕಾರಿನಲ್ಲಿ ಪುತ್ತೂರು ಕಡೆಗೆ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.