ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆಗೆ ತಡೆ

ಸಮಗ್ರ ನ್ಯೂಸ್: ಪುತ್ತೂರು ಸಹಾಯಕ ಆಯುಕ್ತರಾಗಿದ್ದು, ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಗಿರೀಶ್ ನಂದನ್ ಅವರ ವರ್ಗಾವಣೆಗೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ಪ್ರಾಧಿಕಾರ ಅವಧಿಪೂರ್ಣ ವರ್ಗಾವಣೆ ಎಂಬ ನೆಲೆಯಲ್ಲಿ ತಡೆ ನೀಡಿರುವುದಾಗಿ ತಿಳಿದುಬಂದಿದೆ.

Ad Widget ... ..

ಗಿರೀಶ್ ನಂದನ್ ಅವರು ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಸಿ ಆಗಿದ್ದರು. ಅವರ ವರ್ಗಾವಣೆಯ ಬಳಿಕ ಮಂಗಳೂರಿ ಕೆಎಐಡಿಬಿಯಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶ್ಚಂದ್ರ ಅವರು ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಕೆಎಟಿಯಿಂದ ವರ್ಗಾವಣೆ ಆದೇಶಕ್ಕೆ ತಡೆ ದೊರೆತಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಾಗಿದೆ. ಅಡ್ವಕೇಟ್ ವಿಘ್ನೇಶ್ವರ ಯು. ಮತ್ತು ಶ್ರೀನಿವಾಸ ಎಂ.ಎ. ಇವರ ಪರವಾಗಿ ವಾದಿಸಿದ್ದರು.

Ad Widget

Leave a Comment

Your email address will not be published. Required fields are marked *