Ad Widget .

ತೃತೀಯ ಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ| ಅವನು ಅವಳಲ್ಲ ಅವನೇ..!!

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಘಟನೆ ನಡೆದಿದ್ದು, ತೃತೀಯಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ad Widget . Ad Widget .

ಬೆಂಗಳೂರು ಉತ್ತರ ತಾಲೂಕಿನ ದಾಸರಹಳ್ಳಿಯ ಮಂಜುನಾಥ ನಗರ ನಿವಾಸಿ ಚೇತನ್ ತೃತೀಯ ಲಿಂಗಿಯ ವೇಷ ಧರಿಸಿ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದ. ಅಲ್ಲಿಗೆ ಮಹಿಳೆಯರು, ಪುರುಷರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ.

Ad Widget . Ad Widget .

ಚೇತನ್ ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಮೂರು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದಾನೆ. ತಾನು ತೃತೀಯ ಲಿಂಗಿ ಎಂದು ಸುಳ್ಳು ಹೇಳಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ದಾರಿಯಲ್ಲಿ ಓಡಾಡುವವರ ಮೊಬೈಲ್, ಸರ ಕಸಿದು ದೌರ್ಜನ್ಯ ನಡೆಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದು, ಶೆಡ್ ತೆರವುಗೊಳಿಸಿ ಥಳಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *