Ad Widget .

ಮದ್ಯದ ಅಮಲಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ ಕಟುಕರು…!!

ಸಮಗ್ರ ನ್ಯೂಸ್: ಕಂಠಪೂರ್ತಿ ಕುಡಿದ ವ್ಯಕ್ತಿಗೆ ಕೆಲವೊಮ್ಮೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿರುವುದಿಲ್ಲ. ಆತ ತಾನು ಏನು ಮಾಡುತ್ತಿರುವೆನೆಂಬ ಅರಿವಿಲ್ಲದೆ ಕುಡಿದ ಮತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಅರ್ಧ ಸುಟ್ಟ ಯುವತಿಯ ಮೃತದೇಹವನ್ನು ತಿಂದ ಪ್ರಸಂಗವೊಂದು ಭುವನೇಶ್ವರದಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ ಮಯರ‍್ಬಂಜ್ ಜಿಲ್ಲೆಯ ಬದಶಾಹಿನ ಬ್ಲಾಕ್ ನ ಗ್ರಾಮವೊಂದರಲ್ಲಿ ಕೃತ್ಯ‌ ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ 25 ವರ್ಷದ ಯುವತಿಯೊಬ್ಬಳ ಮೃತದೇಹವನ್ನು ಸ್ಥಳೀಯ ಶವಾಗಾರಕ್ಕೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಆದರೆ ಆಕೆಯ ದೇಹ ಪೂರ್ತಿಯಾಗಿ ಸುಟ್ಟಿರಲಿಲ್ಲ. ಈ ವೇಳೆ ವಿಪರೀತ ಕುಡಿದು ತೂರಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದು ಅರ್ಧಸುಟ್ಟ ಮೃತದೇಹವನ್ನು ತಿನ್ನುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರೂ ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Ad Widget . Ad Widget .

ಘಟನೆಯ ಕುರಿತು ಪೊಲೀಸ್ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಪ್ರತ್ಯಕ್ಷದರ್ಶಿ ಲಾಬಾ ಸಿಂಗ್ ಪ್ರತಿಕ್ರಿಯಿಸಿ, ಅವರು ದೇಹದ ಕೆಲವು ಭಾಗವು ಸಂಪೂರ್ಣವಾಗಿ ಸುಟ್ಟುಹೋಗಿಲ್ಲ ಎಂದು ತಿಳಿದರೂ ಮಾಂಸವನ್ನು ಕೆಲವು ತುಂಡುಗಳಾಗಿ ಕತ್ತರಿಸಿ ಸೇವಿಸಿದ್ದಾರೆ ಎಂದು ಆರೋಪಿಸಿದರು.

Leave a Comment

Your email address will not be published. Required fields are marked *