Ad Widget .

ಜು. 19: ಸುಳ್ಯ ತಾ| ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ| ಮಾಧ್ಯಮ ಸಮ್ಮಿಲನ; ಪತ್ರಕರ್ತರ ಸ್ನೇಹ ಸಂಗಮ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ ಜು.19 ರಂದು ಬಂಟರ ಭವನ ಕೇರ್ಪಳ, ಸುಳ್ಯ ಇಲ್ಲಿ ನಡೆಯಲಿದ್ದು ಈ ಪ್ರಯುಕ್ತ ರಾಜ್ಯದ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಪತ್ರಕರ್ತರ ಸ್ನೇಹ ಸಂಗಮ‌ ಸಂಜೆ 3ರಿಂದ ನಡೆಯಲಿದೆ.

Ad Widget . Ad Widget .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಯಾನಂದ ಕೊರತ್ತೋಡಿ, ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮತ್ತು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಪಿ.ಬಿ. ಹರೀಶ್ ರೈ, ಮತ್ತು ಆಕಾಶವಾಣಿ ಮಡಿಕೇರಿಯ ಸುಬ್ರಾಯ ಸಂಪಾಜೆ ವಹಿಸಲಿದ್ದಾರೆ.

Ad Widget . Ad Widget .

ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಹಿರಿಯ ಪತ್ರಕರ್ತರಾದ ಸುರೇಶ್ ಬೆಳೆಗಜೆ , ಹೊಸಪೇಟೆಯ ಪ್ರಜಾವಾಣಿ ವಿಶೇಷ ಪ್ರತಿನಿಧಿಯಾದ ಬಾಲಕೃಷ್ಣ ಎಂ. ಜಿ., ಮಂಗಳೂರು ಡೆಪ್ಯೂಟಿ ಎಡಿಟರ್ ಮತ್ತು ಬಿಸಿನೆಸ್ ಲೈನ್ ನ ಎ.ಜೆ.ವಿನಾಯಕ, ಕೃಷಿ ಬಿಂಬ ಕಾರ್ಕಳ ಇದರ ಸಂಪಾದಕರಾದ ರಾಧಕೃಷ್ಣ ತೊಡಿಕಾನ, ಪುತ್ತೂರು ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ, ಬೆಂಗಳೂರು ಈದಿನ.ಡಾಟ್.ಕಾಂ ಚೀಫ್ ಸಬ್ ಎಡಿಟರ್ ಹೇಮಾ ವೆಂಕಟ್, ಟಿವಿ9 ನ ಸೀನಿಯರ್ ಕರೆಸ್ಪಾಂಡೆಂಟ್ ಕಿರಣ್ ಹನಿಯಡ್ಕ, ನ್ಯೂಸ್18 ಸಹಾಯಕ ಸಂಪಾದಕ ಚಂದ್ರಶೇಖರ ಮಂಡೆಕೋಲು, ಮಂಗಳೂರು ವಿಜಯ ಕರ್ನಾಟಕ ಮುಖ್ಯ ಉಪಸಂಪಾದಕ ರವಿಚಂದ್ರ ಭಟ್, ಭೋಧಿವೃಕ್ಷ ಹಿರಿಯ ಉಪಸಂಪಾದಕಿ ಶ್ರೀದೇವಿ ಅಂಬೆಕಲ್ಲು, ಮಂಗಳೂರು ವಿಜಯ ಕರ್ನಾಟಕ ಸೀನಿಯರ್ ಕಾಪಿ ಎಡಿಟರ್ ಬಾಲಸುಬ್ರಹ್ಮಣ್ಯ ಕಾಯರ, ಮಂಗಳೂರು ವಿಜಯ ಕರ್ನಾಟಕ ಹಿರಿಯ ಉಪ ಸಂಪಾದಕ ಕೃಷ್ಣ ಕೊಲ್ಚಾರ್, ಮೈಸೂರು ವಿಜಯ ಕರ್ನಾಟಕ ಮುಖ್ಯ ಉಪಸಂಪಾದಕ ಲೋಕೇಶ್ ನೀರಬಿದಿರೆ, ಕಲರ‍್ಸ್ ಕನ್ನಡ ಕ್ರಿಯೇಟಿವ್ ಡೈರೆಕ್ಟರ್ ಸುಧನ್ವ ದೇರಾಜೆ, ದಿಗ್ವಿಜಯ ನ್ಯೂಸ್ ಡೆಪ್ಯೂಟಿ ಹೆಡ್ ಸದಾಶಿವ ಎಂ.ಎಸ್., ಮಣಿಪಾಲ ಉದಯವಾಣಿ ಮುಖ್ಯ ಉಪಸಂಪಾದಕ ಸತ್ಯಗಣಪತಿ ಎಂ.ಪಿ., ಪಬ್ಲಿಕ್ ಟಿವಿ ವೆಬ್ ಸೈಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶ್ವಥ್ ಸಂಪಾಜೆ, ಕಾರ್ಕಳ ಉದಯವಾಣಿ ವರದಿಗಾರ ಬಾಲಕೃಷ್ಣ ಭೀಮಗುಳಿ, ಮಂಗಳೂರು ವಿಜಯವಾಣಿ ವರದಿಗಾರ ಹರೀಶ್ ಮೋಟುಕಾನ, ಮಂಗಳೂರು ಹೊಸದಿಗಂತ ವರದಿಗಾರ ಹರೀಶ್ ಕುಲ್ಕುಂದ, ಬೆಂಗಳೂರು ವೇ ಟು ನ್ಯೂಸ್ ಕಂಟೆಂಟ್ ಸ್ಪೆಷಲಿಷ್ಟ್ ಆದ ಜೀವನ್ ಅರಂತೋಡು, ಬೆಂಗಳೂರು ವಿಶ್ವವಾಣಿ ಚೀಫ್ ಸಬ್ ಎಡಿಟರ್ ಭವ್ಯ ಬೊಳ್ಳೂರು, ಬೆಂಗಳೂರು ಈದಿನ.ಡಾಟ್.ಕಾಂ ನ ಅಬೂಬಕ್ಕರ್ ಸಿದ್ದಿಕ್ ಎಸ್.ಎಂ., ಮಂಗಳೂರು ವಾರ್ತಾಭಾರತಿ ಸೀನಿಯರ್ ಸಬ್ ಎಡಿಟರ್ ಸಂಶುದ್ಧೀನ್ ಎಣ್ಮೂರು, ಮಂಗಳೂರು ವಾರ್ತಾಭಾರತಿ ಸಬ್ ಎಡಿಟರ್ ರಾದ ಅಬ್ದುಲ್ ರವೂಫ್, ಬೆಂಗಳೂರು ಸುವರ್ಣ ವೆಬ್ ಸೈಟ್ ಸಬ್ ಎಡಿಟರ್ ಅನುಶಾ ಕೆ.ಬಿ., ಬೆಂಗಳೂರು ವಿಜಯವಾಣಿ ಉಪ ಸಂಪಾದಕ ಬಾಲಚಂದ್ರ ಕೋಟೆ, ಸುವರ್ಣ ನ್ಯೂಸ್ ಸಬ್ ಎಡಿಟರ್ ರಾದ ಗೌತಮಿ ಕೊಯಿಂಗುಳಿ, ಬೆಂಗಳೂರು ಟಿವಿ ವಿಕ್ರಮದ ಮಮ್ತಾಜ್ ನೇಲ್ಯಡ್ಕ, ಬೆಂಗಳೂರು ಟಿವಿ ವಿಕ್ರಮದ ವಿಸ್ಮಯ ಬುಡ್ಲೆಗುತ್ತು, ದಿಗ್ವಿಜಯ ನ್ಯೂಸ್ ನ ದೀಪ್ತಿ ಮುಚ್ಚಾರ, ಚೈತ್ರಾ ಪುರ, ಬೆಂಗಳೂರು ಹೊಸದಿಗಂತ ಉಪಸಂಪಾದಕಿ ಶರಣ್ಯ ಕೊಲ್ಚಾರ್, ಬೆಂಗಳೂರು ಹೊಸದಿಗಂತ ಉಪಸಂಪಾದಕಿ ಚರಿಷ್ಮಾ ದೇರುಮಜಲು ಭಾಗವಹಿಸಲಿದ್ದಾರೆ.

ಅಪರಾಹ್ನ 5 ರಿಂದ 7:30 ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮ:
ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಭಾಗಿರಥಿ ಮುರುಳ್ಯ, ಸಮಾರೋಪ ಭಾಷಣವನ್ನು ವಿಸ್ತಾರ ನ್ಯೂಸ್ ಎಡಿಟರ್ ಇನ್ ಚೀಫ್ ಮತ್ತು ಸಿಇಒ ಹರಿಪ್ರಸಾದ್ ಕೋಣೆಮನೆ, ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನವನ್ನು ಮಾಡಲಿರುವವರು. ಕರ್ನಾಟಕ ವಿಧಾನ ಸಭಾದ್ಯಕ್ಷ ಯು.ಟಿ. ಖಾದರ್, ಸ್ಮರಣ ಸಂಚಿಕೆ ಬಿಡುಗಡೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಅಶೋಕ್ ಕುಮಾರ್ ರೈ, ಕರ್ನಾಟಕ ಸರಕಾರ ಮಾಜಿ ಸಚಿವರು ಎಸ್. ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಡಾ|ರೇಣುಕಾ ಪ್ರಸಾದ್ ಕೆ.ವಿ., ದ.ಕ. ಮಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶ್ರೀನಿವಾಸ್ ನಾಯಕ್ ಇಂದಾಜೆ, ದ.ಕ. ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಹೆಚ್. ಜಿ. ಭಾಗವಹಿಸಲಿದ್ದಾರೆ. ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ|ಯು.ಪಿ. ಶಿವಾನಂದ ಮತ್ತು ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿಯವರಿಗೆ ವಿಶೇಷ ಸನ್ಮಾನ ನಡೆಯಲಿದೆ.

Leave a Comment

Your email address will not be published. Required fields are marked *