Ad Widget .

ಬಂಟ್ವಾಳ: ಹಾಸಿಗೆ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ| ಲಕ್ಷಾಂತರ ರೂ. ನಷ್ಟ

ಸಮಗ್ರ ನ್ಯೂಸ್: ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಫ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿ ಎಂಬಲ್ಲಿ ಜು. 12 ರಂದು ಬೆಳಿಗ್ಗೆ ನಡೆದಿದೆ.

Ad Widget . Ad Widget .

ಸಜೀಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಪ್ಯಾಕ್ಟರಿ ಇದಾಗಿದೆ. ಪ್ಯಾಕ್ಟರಿಯೊಳಗೆ ಲಕ್ಷಾಂತರ ರೂ. ಮೌಲ್ಯದ ಮೆಷಿನರಿಗಳು ಇದ್ದು, ಬೆಂಕಿ ಹಚ್ಚಿಕೊಂಡಿದೆ. ಇದರ ಜೊತೆಗೆ ಲಕ್ಷಾಂತರ ರೂ ಗಳ ತಲೆದಿಂಬು ಹಾಗೂ ಹಾಸಿಗೆಗಳು ದಸ್ತಾನು ಇದ್ದವು.

Ad Widget . Ad Widget .

ದಾಸ್ತಾನು ಕೊಠಡಿಗೆ ಬೆಂಕಿ ಹಚ್ಚಿಕೊಂಡಿದೆಯಾದರೂ ದೊಡ್ಡ ಮಟ್ಟದಲ್ಲಿ ಬೆಂಕಿಗೆ ಆಹುತಿಯಾಗುವುದನ್ನು ನೀರು ಹಾಯಿಸಿ ತಡೆಯಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾದರು.

Leave a Comment

Your email address will not be published. Required fields are marked *