ಸಮಗ್ರ ನ್ಯೂಸ್: ರೈಲಿನ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಭಕ್ತರಿಗೆ ಪ್ರಮುಖ ಮಾಹಿತಿಯೊಂದಿದೆ. ಜುಲೈ 17ರಿಂದ ಅನ್ವಯವಾಗುವಂತೆ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ರೈಲು ಸಂಖ್ಯೆ 16540 ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ರೈಲು ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುತ್ತದೆ.
ಈ ರೈಲು ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಯಡಿಯೂರು, ಕುಣಿಗಲ್, ನೆಲಮಂಗಲ ಚಿಕ್ಕಬಣಾವರ ಮೂಲಕ ಸಂಚಾರ ನಡೆಸುತ್ತದೆ. ಪ್ರಮುಖವಾಗಿ ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಿದೆ.
ಹೊಸ ವೇಳಾಪಟ್ಟಿ; ನೈಋತ್ಯ ರೈಲ್ವೆಯ ಆದೇಶದಂತೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಸಂಜೆ 4.30ಕ್ಕೆ ಯಶವಂತಪುರವನ್ನು ತಲುಪಲಿದೆ. ಜುಲೈ 17ರಿಂದಲೇ ಜಾರಿಗೆ ಬರುವಂತೆ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
ರೈಲು ಬೆಳಗ್ಗೆ 7ಗಂಟೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಬಂಟ್ವಾಳ (7.33 ರಿಂದ 7.35), ಕಬಕ ಪುತ್ತೂರು (8.20 ರಿಂದ 8.22), ಸುಬ್ರಮಣ್ಯ ರೋಡ್ (9 ರಿಂದ 9.10)ಕ್ಕೆ ಆಗಮಿಸಲಿದೆ ಎಂದು ಪ್ರಕಟಣೆ ಹೇಳಿದೆ.
ಸುಬ್ರಹ್ಮಣ್ಯ ರೋಡ್‌ನಿಂದ ಹೊರಡುವ ರೈಲು ಸಕಲೇಶಪುರ (11.30 ರಿಂದ 11.40), ಹಾಸನ (12.40 ರಿಂದ 12.45), ಚನ್ನರಾಯಪಟ್ಟಣ (1.10 ರಿಂದ 1.11), ಶವಣಬೆಳಗೊಳ (1.22 ರಿಂದ 1.23), ಬಿ. ಜಿ. ನಗರ (1.47 ರಿಂದ 1.48) ತಲಪಲಿದೆ.
ಯಡಿಯೂರು (2.01 ರಿಂದ 2.02), ಕುಣಿಗಲ್ (2.18 ರಿಂದ 2.19), ನೆಲಮಂಗಲ (3 ರಿಂದ 3.01), ಚಿಕ್ಕಬಣಾವರ (3.44 ರಿಂದ 3.45)ಕ್ಕೆ ತಲುಪಲಿದೆ. ಯಶವಂತಪುರ ನಿಲ್ದಾಣಕ್ಕೆ 4.30ಕ್ಕೆ ಆಗಮಿಸಲಿದೆ. ರೈಲಿನ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಈ ರೈಲು ಸೇವೆಯ ಉಪಯೋಗ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಮರಳಹಳ್ಳಿಯಲ್ಲಿ ನಿಲುಗಡೆ ನೈಋತ್ಯ ರೈಲ್ವೆಯ ಮತ್ತೊಂದು ಆದೇಶದಂತೆ ಮರಳಹಳ್ಳಿಯ ನಿಲ್ದಾಣದಲ್ಲಿ ಹಲವು ರೈಲುಗಳನ್ನು 26/92023ರ ತನಕ ನಿಲ್ಲಿಸಲು ಅನುಮತಿ ನೀಡಲಾಗಿದೆ.
ರೈಲು ಸಂಖ್ಯೆ 06381/06382 ಬೆಂಗಳೂರು ಕಂಟೋನ್ಮೆಂಟ್-ಕೋಲಾರ- ಬೆಂಗಳೂರು ಡೆಮು ರೈಲು, ರೈಲು ಸಂಖ್ಯೆ 06561 ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ ಮೆಮು, ರೈಲು ನಂಬರ್ 06292 ಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು, ರೈಲು ನಂಬರ್ 01774 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ನಿಲುಗಡೆಗೊಳ್ಳಲಿದೆ.
ಅಲ್ಲದೇ ರೈಲು ಸಂಖ್ಯೆ 01773 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು, ರೈಲು ನಂಬರ್ 06291 ಕೆಆರ್ ಪುರ-ಕುಪ್ಪಂ ಮೆಮು, ರೈಲು ಸಂಖ್ಯೆ 06562 ಮಾರಿಕುಪ್ಪಂ-ಕೆಆರ್ ಪುರ, ರೈಲು ಸಂಖ್ಯೆ 01775 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು, ರೈಲು ಸಂಖ್ಯೆ 01776 ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು, ರೈಲು ನಂಬರ್ 01779/01776 ಬೈಯಪ್ಪನಹಳ್ಳಿ-ಮಾರಿಕುಪ್ಪಂ-ಬೈಯಪ್ಪನಹಳ್ಳಿ ಮೆಮು ರೈಲು ನಿಲುಗಡೆಗೊಳ್ಳಲಿದೆ.
ಹೂಡಿಯಲ್ಲಿ ನಿಲುಗಡೆ ನೈಋತ್ಯ ರೈಲ್ವೆ ಮತ್ತೊಂದು ಆದೇಶದಲ್ಲಿ ಹೂಡಿ ಹಾಲ್ಟ್ ಸ್ಟೇಷನ್‌ನಲ್ಲಿನ ಪ್ರಾಯೋಗಿಕ ನಿಲುಗಡೆಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ರೈಲು ನಂಬರ್ 16520/16519 ಕೆಎಸ್‌ಆರ್ ಬೆಂಗಳೂರು- ಜೋಲಾರಪಟ್ಟಿ-ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ 30/9/2023ರ ತನಕ ನಿಲುಗಡೆಗೊಳ್ಳಲಿದೆ.
ರೈಲು ನಂಬರ್ 16520 ಕೆಎಸ್‌ಆರ್ ಬೆಂಗಳೂರು-ಜೋಲಾರಪಟ್ಟಿ ಮೆಮು ಎಕ್ಸ್‌ಪ್ರೆಸ್ ಹೂಡಿ ಹಾಲ್ಟ್ ಸ್ಟೇಷನ್‌ಗೆ ಸಂಜೆ 6.06ಕ್ಕೆ ಬರಲಿದ್ದು, 6.07ಕ್ಕೆ ಹೊರಡಲಿದೆ. ಅದೇ ರೀತಿ ರೈಲು ನಂಬರ್ 16519 ಜೋಲಾರಪಟ್ಟಿ-ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ಹೂಡಿ ಹಾಲ್ಟ್ ಸ್ಟೇಷನ್‌ಗೆ ಬೆಳಗ್ಗೆ 6.43ಕ್ಕೆ ಬರಲಿದ್ದು, 6.44ಕ್ಕೆ ಹೊರಡಲಿದೆ.