Ad Widget .

ಕೊಡಗು: ಡಿ.ಸಿ.ಕಛೇರಿ ತಡೆಗೋಡೆ ಕಳಪೆ ಕಾಮಗಾರಿ ಪ್ರಕರಣ, ಸ್ಥಳ ತನಿಖೆಗೆ ಮುಂದಾದ ಲೋಕಾಯುಕ್ತ

ಸಮಗ್ರ ನ್ಯೂಸ್: ಕೊಡಗಿನಲ್ಲಿ ಬಹು ಚರ್ಚಿತ ವಿವಾದದ ಬೆಟ್ಟವನ್ನೇ ಸೃಷ್ಟಿಸಿದ್ದ ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಮುಂದಿನ ತಡೆಗೋಡೆ ನಿರ್ಮಾಣದ ಕಳಪೆ ಕಾಮಗಾರಿಯ ಬಗ್ಗೆ ಸ್ಥಳ ತನಿಖೆಗೆ ಕರ್ನಾಟಕ ಲೋಕಾಯುಕ್ತ ಮುಂದಾಗಿದೆ.

Ad Widget . Ad Widget .

ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಈ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಸಂಭಂದ ಪಟ್ಟ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು,ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತ ಕಿರಿಯ ಅಭಿಯಂತರರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲೆಗಳ ಸಹಿತ ಸವಿಸ್ತಾರವಾಗಿ ದೂರು 2022 ರಲ್ಲಿ ದೂರು ದಾಖಲಿಸಿದ್ದರು. ಈ ವಿವಾದಿತ ತಡೆಗೋಡೆ ಯನ್ನು ವೀಕ್ಷಣೆ ಮಾಡಲು ಬಂದ ಅಂದಿನ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದು ರಾಜ್ಯಾದ್ಯಂತ ಸುದ್ದಿ ಆಗಿತ್ತು. ಕೊಡಗು ಕಾಂಗ್ರೆಸ್ ಈ ಪ್ರಕರಣವನ್ನು ಹಾಗೂ ತಡೆಗೋಡೆ ಕಳಪೆ ಕಾಮಗಾರಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ವಿಧಾನ ಸಭಾ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು.

Ad Widget . Ad Widget .

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ದೂರಿನ ಪರಿಣಾಮ ಕಿರಿಯ ಇಂಜಿನಿಯರ್ ದೇವರಾಜ್ ಅಮಾನತ್ತಿಗೆ ಒಳಗಾಗಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ತಮ್ಮ ಚೊಚ್ಚಲ ಅಧಿವೇಶದಲ್ಲಿಯೇ ಈ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿ ಸಂಭಂದಿಸಿದ ಎಲ್ಲಾ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದರು. ಕರ್ನಾಟಕ ಲೋಕಾಯುತ್ತ ಜುಲೈ 17 ಮತ್ತು 18 ರಂದು ತಮ್ಮ ಇಲಾಖೆಯ ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ಮುಂದಾಗಿದೆ. ದೂರುದಾರರಾದ ತೆನ್ನಿರಾ ಮೈನಾ ಸಮ್ಮುಖದಲ್ಲಿ ತನಿಖೆ ನಡೆಸುವಂತೆ ಆದಿಕಾರಿಗಳಿಗೆ ಸೂಚಿಸಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಹೆಚ್.ಎಸ್.ಚಂದ್ರಮೌಳಿ ತನಿಖೆ ಚುರುಕುಗೊಳಿಸುವಂತೆ ಲೋಕಾಯುಕ್ತದಲ್ಲಿ ಒತ್ತಡ ತಂದಿದ್ದರು.

Leave a Comment

Your email address will not be published. Required fields are marked *