ಸಮಗ್ರ ನ್ಯೂಸ್: ಮಳೆಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆಮಾಡಬೇಕು, ಅದರಲ್ಲೂ ಆಯುರ್ವೇದ ಪ್ರಕಾರ ಕೆಲವೊಂದು ಆಹಾರಗಳನ್ನು ಸೇವಿಸುವುದು ಉತ್ತಮ. ಈ ಆಹಾರಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ವಾತ, ಕಫ ಸಮಸ್ಯೆಯಿಂದ ದೂರ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಮಿಸ್ ಮಾಡದೆ ಸೇರಿಸಿ.
- ಮಳೆಗಾಲದ ಆಹಾರಕ್ರಮದಲ್ಲಿ ತಪ್ಪದೆ ಶುಂಠಿ ಸೇರಿಸಿ. ಇದರಿಂದ ದೇಹದಲ್ಲಿ ಮೈ ಉಷ್ಣತೆ ಕಾಪಾಡಲು ಸಹಕಾರಿ. ಅಲ್ಲದೆ ಶುಂಠಿಯನ್ನು ಬಳಸುವುದರಿಂದ ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ತಡೆಗಟ್ಟಲು ಸಹಕಾರಿಯಾಗಿದೆ. ಮಳೆಗಾಲದಲ್ಲಿ ಈ ಕಷಾಯಗಳನ್ನ ಕುಡಿದರೆ ಕಾಯಿಲೆ ಬೀಳುವುದು ತಪ್ಪುತ್ತದೆ.
- ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ, ಬೆಳ್ಳುಳ್ಳಿ ತಿನ್ನುವುದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು. ಆದ್ದರಿಂದ ನೀವು ಪ್ರತಿನಿತ್ಯ ಮಾಡುವ ಸೂಪ್, ಸಾರಿನಲ್ಲಿ ಬೆಳ್ಳುಳ್ಳಿ ತಪ್ಪದೆ ಬಳಸಿ.
- ಪುದಿನಾ ಟೀ (ಬ್ಲ್ಯಾಕ್ ಟೀ) ಗೆ ಹಾಕಿ ಕುಡಿದರೆ ತುಂಬಾನೇ ಹಿತ ಅನಿಸುವುದು ಮಾತ್ರವಲ್ಲ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿ ತಡೆಗಟ್ಟಲು ಸಹಕಾರಿಯಾಗಿದೆ.
- ಹೆಸರು ಬೇಳೆ ಇದರಲ್ಲಿ ಪ್ರೊಟೀನ್, ವಿಟಮಿನ್, ಖನಿಜಾಂಶ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಹೆಸರುಕಾಳು, ಹೆಸರು ಬೇಳೆ ಇವುಗಳನ್ನು ಬಳಸುವುದು ತುಂಬಾ ಒಳ್ಳೆಯದು.
- ಜೇನನ್ನು ಮಳೆಗಾಲದಲ್ಲಿ ಪ್ರತಿದಿನ ಬಳಸಿ. ಬೆಳಗ್ಗೆ ಬಿಸಿ ನೀರಿಗೆ ಜೇನು ಹಾಕಿ ಕುಡಿಯಿರಿ, ಮಕ್ಕಳಿಗೂ ಕೊಡುವುದು ಒಳ್ಳೆಯದು, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
- ಜೋಳ ಜೋಳದಲ್ಲಿ ಕೂಡ ನಾರಿನಂಶ, ಕಬ್ಬಿಣದಂಶ, ವಿಟಮಿನ್ಸ್ ಇರುವುದರಿಂದ ಮಳೆಗಾಲದಲ್ಲಿ ಜೋಳವನ್ನು ಬಳಸಿ.
- ಸೋರೆಕಾಯಿ ಸೋರೆಕಾಯಿ ಕೂಡ ಮಳೆಗಾಲಕ್ಕೆ ಅತ್ಯಂತ ಸೂಕ್ತವಾದ ಆಹಾರವಾಗಿದೆ. ಇದರಿಂದ ಸೂಪ್ ಮಾಡಿ ಕುಡಿಯುವುದರಿಂದ ಮೈ ತೂಕ ನಿಯಂತ್ರಿಸಲು ಕೂಡ ಸಹಕಾರಿ.
- ಅರಿಶಿಣ ಅರಿಶಿಣವನ್ನು ಮಳೆಗಾಲದಲ್ಲಿ ತಪ್ಪದೆ ಬಳಸಿ. ಗಂಟಲು ನೋವು, ಫ್ಲೂ, ಕೆಮ್ಮು, ಶೀತ ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ ಅರಿಶಿಣ ಪರಿಣಾಮಕಾರಿ.
9.ಕೆಂಪಕ್ಕಿಯ ಅನ್ನ ಮಧುಮೇಹಿಗಳಿಗೂ ಒಳ್ಳೆಯದು. ಇದರಲ್ಲಿ, ಕಬ್ಬಿಣದಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
- ಕಲ್ಲುಪ್ಪು ನೀವು ಅಡುಗೆ ಮಾಡುವಾಗ ಪುಡಿ ಉಪ್ಪಿನ ಬದಲಿಗೆ ಕಲ್ಲುಪ್ಪು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಒಳ್ಳೆಯದು.
- ಹಾಗಲಕಾಯಿ ಮಳೆಗಾಲದಲ್ಲಿ ತಪ್ಪದೆ ತಿನ್ನುವ ಆಹಾರಗಳಲ್ಲಿ ಹಾಗಾಲಕಾಯಿ ಕೂಡ ಒಂದು. ಇದರಲ್ಲಿ ವಿಟಮಿನ್ ಸಿ ಅಧಿಕವಿದೆ, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ
(ಸಂಗ್ರಹ)