ಸಮಗ್ರ ನ್ಯೂಸ್: ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜು.9 ರಂದು ನಡೆದ ಮುಕ್ತ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಹಲವು ಪ್ರಶಸ್ತಿ ಲಭಿಸಿದೆ.

ಶರತ್ ಅಡ್ಕಾರ್ ಹಾಗೂ ಶೋಭಾಕುಮಾರಿ ದಂಪತಿಗಳ ಪುತ್ರಿ ಸೋನಾ ಅಡ್ಕಾರ್ 9 ರಿಂದ 12ನೇ ವಯೋಮಾನದ ಬಾಲಕಿಯರ ಟ್ರೆಡಿಷನಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕುಶಾಲಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ ಹಾರ್ದಿಕ ಕೆರೆಕ್ಕೋಡಿ 7ನೇ ಸ್ಥಾನ ಹಾಗೂ ಸ್ವಂತ ಆಯ್ಕೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

9 ರಿಂದ 12 ವಯೋಮಾನದ ಬಾಲಕರ ಟ್ರೆಡಿಷನಲ್ ವಿಭಾಗದಲ್ಲಿ ತನುಷ್ ಎಂ.ಹೆಚ್. ತೃತೀಯ ಸ್ಥಾನ ಪಡೆದುಕೊಂಡರುತ್ತಾರೆ. ಇವರು ಹರೀಶ್ ಮೋಂಟಡ್ಕ ಮತ್ತು ಭವಾನಿ ದಂಪತಿಗಳ ಪುತ್ರ. 12 ರಿಂದ 15ನೇ ವಯೋಮಾನದ ಬಾಲಕರ ಟ್ರೆಡಿಷನಲ್ ವಿಭಾಗದಲ್ಲಿ ತನುಷ್ ಕೆ.ಆರ್. 5ನೇ ಸ್ಥಾನ ಪಡೆದ ಇವರು ರವಿ ಹಾಗೂ ಪ್ರಜ್ಞ ದಂಪತಿಗಳ ಪುತ್ರ.
ಸ್ನೇಹಮಯಿ ಯೋಗ ಆಚಾರ್ಯ ಪ್ರಶಸ್ತಿ ಪುರಸ್ಕೃತ ಯೋಗಗುರು ಸಂತೋಷ್ ಮುಂಡಕಜೆ ಅವರ ಗರಡಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಇವರಾಗಿದ್ದಾರೆ.