ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಸರ್ಕಾರವು ಬಜೆಟ್ ನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಹಲವು ಯೋಜನೆಗಳನ್ನು ಕೈಬಿಟ್ಟ ಬೆನ್ನಲ್ಲೇ ಇದೀಗ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಕೊಕ್ ನೀಡಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಧಾನಮಂತ್ರಿ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಿಂದ ಹೊರಬಂದು ನಮ್ಮದೇ ರಾಜ್ಯದ ಹೊಸ ಬೆಳೆ ವಿಮಾ ನೀತಿ ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಮರ್ಪಕ ಚಿಂತನೆಯ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರದ ಫಸಲ್ ಬಿಮಾ ಬೆಳೆ ಯೋಜನೆಯಲ್ಲಿನ ಸಾಧಕ-ಬಾಧಕ ಪರಿಶೀಲಿಸಿದ ಬಳಿಕ ಗುಜರಾತ್ ಸರ್ಕಾರವೂ ಯೋಜನೆಯನ್ನು ಕೈಬಿಟ್ಟಿದ್ದು, ನಮ್ಮ ರಾಜ್ಯದಲ್ಲೂ ಫಸಲ್ ಬಿಮಾ ಯೋಜನೆ ಕೈಬಿಟ್ಟು ಹೊಸ ಬೆಳೆ ವಿಮಾ ನೀತಿ ರೂಪಿಸಲಾಗುವುದು ಎಂದರು.