ಸಮಗ್ರ ನ್ಯೂಸ್: ಕಡಬ ತಾಲೂಕಿನ ಕಲ್ಲುಗುಡ್ಡೆಯ ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ.
ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಮೇಲೆ ಹಲ್ಲೆ ನಡೆದಿದ್ದು, ಜಾಗದ ತಕರಾರಿನ ವಿಚಾರದಲ್ಲಿ ಪಕ್ಕದ ಮನೆಯ ನಾಲ್ವರಿಂದ ಫೌಝಿಯಾ ಮೇಲೆ ಹಲ್ಲೆ ಮಾಡಿದ್ದಾರೆ. ನಿತ್ಯ ಜಾಗದ ವಿಚಾರದಲ್ಲಿ ವಿನಾಕಾರಣ ಪುಂಡರ ಗ್ಯಾಂಗ್ ವೊಂದು ಜಗಳವಾಡುತ್ತಿದ್ದರು.
ಕಲ್ಲುಗುಡ್ಡೆಯಲ್ಲಿ ತಂದೆಯ ಮನೆಗೆ ಫೌಝಿಯಾ ಹೋಗಿದ್ದರು, ಈ ಸಂದರ್ಭ ತಂದೆ ಹಾಗೂ ಮಗಳು ಫೌಝಿಯಾ ಮೇಲೆ ಪುಂಡರ ಗ್ಯಾಂಗ್ ಹಲ್ಲೆ ಮಾಡಿದೆ. ಕಡಬ ಸರ್ಕಾರಿ ಆಸ್ಪತ್ರೆಗೆ ಫೌಝಿಯಾ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.