Ad Widget .

ಭ್ರಷ್ಟಾಚಾರ ಅಭಿಯಾನ V/s ಜಾಹೀರಾತು ರಹಿತ ವರದಿ| ಜಾಹೀರಾತು ಮೂಲಗಳು ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರ : ಶೈಲೇಶ್ ಅಂಬೆಕಲ್ಲು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಸ್ಥಳೀಯ ಪತ್ರಿಕೆಯೊಂದು ಗ್ರಾಮಸಭೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಅಭಿಯಾನ ನಡೆಸಲು ಮುಂದಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರೋರ್ವರು ಕಾರ್ಯಕ್ರಮದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆ ಪತ್ರಿಕೆಯ ವರದಿಗಾರರೊಂದಿಗೆ ನಡೆದ ಚರ್ಚೆ ವೇಳೆ ಜಾಹೀರಾತು ರಹಿತವಾಗಿ ಪತ್ರಿಕೆ ನಡೆಸಿ ಎಂದು ಸದಸ್ಯರು ಹೇಳಿರುವುದಾಗಿ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ದೇವಚಳ್ಳ ಗ್ರಾ.ಪಂ ಸದಸ್ಯ ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

ಘಟನೆಯ ವಿವರ: ಸುಳ್ಯ ತಾಲೂಕಿನ ದೇವಚಳ್ಳ ಗ್ರಾ.ಪಂ ನ ಗ್ರಾಮಸಭೆ ನಡೆದಿದ್ದು, ಸಭೆಯಲ್ಲಿ ಸ್ಥಳೀಯ ಪತ್ರಿಕೆಯೊಂದರ ಪ್ರತಿನಿಧಿ ಆ ಪತ್ರಿಕೆಯ ‘ಭ್ರಷ್ಟಾಚಾರ ವಿರೋಧಿ ಅಭಿಯಾನ’ ದ ಘೋಷವಾಕ್ಯವನ್ನು ಸಭಿಕರಲ್ಲಿ ಹೇಳಿಸಲು ಮುಂದಾಗಿದ್ದಾರೆ. ಈ ವೇಳೆ ಗ್ರಾ.ಪಂ ಸದಸ್ಯ ಶೈಲೇಶ್ ಅಂಬೆಕಲ್ಲು, ಪತ್ರಿಕೆ ನಡೆಸುವವರು ಜಾಹೀರಾತು ನೀಡಿದವರ ಸುದ್ದಿಯನ್ನು ದೊಡ್ಡದಾಗಿಯೂ, ಜಾಹೀರಾತು ನೀಡದವರ ಸುದ್ದಿಯನ್ನು ಸಣ್ಣದಾಗಿಯೂ ಪ್ರಕಟಿಸುತ್ತಾರೆ. ಇದೂ ಭ್ರಷ್ಟಾಚಾರದ ಒಂದು ರೂಪ’ ಎಂದು ಹೇಳಿರುವುದಾಗಿ ಆ ಪತ್ರಿಕೆಯು ತನ್ನ ವರದಿಯಲ್ಲಿ ಬಿತ್ತರಿಸಿದೆ. ಸದ್ಯ ಈ ಸುದ್ದಿಯು ಪತ್ರಿಕೆಯ ಹಾಗೂ ಪಂಚಾಯತ್ ಸದಸ್ಯರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಈ ಕುರಿತಂತೆ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

”ಪತ್ರಿಕಾ ಜಾಹೀರಾತು ಬಗ್ಗೆ ತನ್ನ ಹೇಳಿಕೆಯನ್ನು ತಿರುಚಿದ್ದಾರೆ. ಪತ್ರಿಕಾ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುತ್ತೇವೆ ಎಂದು ಇವರು ಹಲವು ಕಡೆ ಹೇಳಿದ್ದಾರೆ. ಇದು ಕೂಡಾ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ ಎಂಬುದು ನನ್ನ ನಿಲುವಾಗಿದೆ. ಇವರದು ನಿಜವಾದ ಭ್ರಷ್ಟಾಚಾರ ವಿರೋಧಿ ಅಭಿಯಾನವಲ್ಲ. ಜಾಹೀರಾತು ಸಿಗದೆ ಪತ್ರಿಕೆಗಳು ನಡೆಯಲು ಸಾಧ್ಯವಿಲ್ಲ ಎಂಬ ಕನಿಷ್ಟ ಜ್ಞಾನವೂ ನನಗೆ ಇದೆ. ಉಳಿದ ಯಾವ ಪತ್ರಿಕೆಗಳೂ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುತ್ತೇವೆ ಎಂದು ಹೇಳುವುದಿಲ್ಲ. ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರವಾಗಬಹುದು. ಆದರೆ ನನ್ನ ಹೇಳಿಕೆಯನ್ನು ತಿರುಚಿ ಉದ್ದೇಶಪೂರ್ವಕವಾಗಿ ಹಿಂದಿನ ಪತ್ರಿಕೆ ಹಾಗೂ ಹಿಂದಿನ ಘಟನೆಗಳನ್ನು ಉಲ್ಲೇಖಿಸಿರುವುದೇ ಅವರ ಮಾನಸಿಕತೆಯನ್ನು ತೋರಿಸುತ್ತದೆ. ಜಾಹೀರಾತು ನೀಡದೇ ನ್ಯೂಸ್‌ ಹಾಕುವುದಿಲ್ಲ ಎನ್ನುವ ಧೋರಣೆ ಬದಲಾಗಬೇಕು. ನಾನು ಅಲ್ಲಿ ಮಾತನಾಡಿರುವ ವಿಡಿಯೋ ಚಿತ್ರೀಕರಣವಾಗಿದೆ. ಅದನ್ನು ಎಡಿಟ್‌ ಮಾಡದೆ ಯಥಾವತ್ತಾಗಿ ತೋರಿಸಲಿ ಎಂದು ಸವಾಲು ಹಾಕುತ್ತಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದು, ಮುಂದೆ ಪ್ರಕರಣ ಯಾವ ತಿರುವು ಪಡೆದುಕೊಳ್ಳುವುದೋ ಕಾದುನೋಡಬೇಕಿದೆ.

Leave a Comment

Your email address will not be published. Required fields are marked *