ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ “ಬ್ರಹ್ಮಗಂಟು” ಖ್ಯಾತಿಯ ಭರತ್ ಬೋಪಣ್ಣ

ಸಮಗ್ರ ನ್ಯೂಸ್: ಝೀ ಕನ್ನಡ “ಬ್ರಹ್ಮಗಂಟು” ಧಾರವಾಹಿ “ಲಕ್ಕಿ” ಖ್ಯಾತಿಯ ಬಹುಭಾಷಾ ನಾಯಕ ನಟ “ಭರತ್ ಬೋಪಣ್ಣ” ಅವರು ಇತ್ತೀಚೆಗೆ ಬೆಳ್ಳಾರೆಯ ನೆಟ್ಟಾರಿನ “ರಕ್ಷಾ ಆಯುರ್ವೇದ” ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಗಾಗಿ ದಾಖಲಾಗಿದ್ದರು.

Ad Widget ... ..

ಇವರು “ವಿಜಯಾನಂದ”, “ಡೆಮೋಪೀಸ್”, “ಗಿರಿಜಾ ಕಲ್ಯಾಣ” ಇತ್ಯಾದಿ ಕನ್ನಡ, ತೆಲುಗು, ತಮಿಳು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟರಾಗಿದ್ದಾರೆ. ಡಿಸ್ಕ್ ಸಮಸ್ಯೆಯಿಂದ ಬಳಲುತಿದ್ದ ಇವರು ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

Ad Widget

ಆಸ್ಪತ್ರೆಯಿಂದ ನಿರ್ಗಮಿಸುವ ವೇಳೆ ಆಸ್ಪತ್ರೆಯ ಸಂಸ್ಥಾಪಕ ವೈದ್ಯರಾದ ಡಾ| ತಿರುಮಲೇಶ್ವರ ಭಟ್ ಶಾಂತಿಮೂಲೆ ಅವರು ಭರತ್ ಬೋಪಣ್ಣ ಅವರಿಗೆ ಸ್ಮರಣಿಕೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಿಕಿತ್ಸೆಯು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಪ್ರಶಂಶಿಸಿದ್ದಾರೆ. ಹಾಗೂ ರಕ್ಷಾ ಆಸ್ಪತ್ರೆಯ ವೈದ್ಯರುಗಳಾದ ಡಾ| ತಿರುಮಲೇಶ್ವರ ಭಟ್ ಶಾಂತಿಮೂಲೆ, ಡಾ| ಅವಿನಾಶ್ ಶಾಂತಿಮೂಲೆ, ಡಾ| ಜಯಶ್ರೀ ಭಟ್, ಡಾ| ಅನಿತಾ ಹಾಗೂ ಸಿಬ್ಬಂದಿ ವರ್ಗಕ್ಕೆ ಭರತ್ ಬೋಪಣ್ಣ ಅವರು ಧನ್ಯವಾದಗಳನ್ನು ತಿಳಿಸಿದರು.

ಖ್ಯಾತ ನಿರ್ದೇಶಕರಾದ ಎ.ಎಲ್. ವಿಜಯ್ ಅವರ ನಿರ್ದೇಶನದಲ್ಲಿ ಬಹುಭಾಷಾ ಚಲನಚಿತ್ರ “Mission Chapter-1” ನಲ್ಲಿ ಭರತ್ ಬೋಪಣ್ಣನವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಅತೀ ಶೀಘ್ರದಲ್ಲಿ ತೆರೆಯ ಮೇಲೆ ಬರಲಿದೆ.

Leave a Comment

Your email address will not be published. Required fields are marked *