Ad Widget .

ರೋಗಿ ಜೊತೆಗೆ ನರ್ಸ್‌ನ ಪಲ್ಲಂಗದಾಟ| ಹೃದಯಾಘಾತದಿಂದ ರೋಗಿ‌ ಸಾವು

ಸಮಗ್ರ ನ್ಯೂಸ್: ಆಸ್ಪತ್ರೆಯಲ್ಲಿ ರೋಗಿಯ ಜೊತೆ ನರ್ಸ್ ಸೆಕ್ಸ್ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿ ರೋಗಿ ಮೃತಪಟ್ಟ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿದ್ದು, ನರ್ಸ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

Ad Widget . Ad Widget .

ನರ್ಸ್ ಒಂದು ವರ್ಷದಿಂದ ಆಸ್ಪತ್ರೆಯಲ್ಲಿದ್ದ ರೋಗಿಯನ್ನು ಪ್ರೇಮಿಸಿದ್ದು ಇಬ್ಬರು ಕಾರು ಪಾರ್ಕಿಂಗ್ ನಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದರು. ಕಾರಿನ ಹಿಂಬದಿ ಸೀಟಿನಲ್ಲಿ ರೋಗಿಯ ದೇಹ ಪತ್ತೆಯಾಗಿದ್ದು ಪ್ಯಾಂಟ್ ಕೆಳಗೆ ಜಾರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ನರ್ಸ್ 42 ವರ್ಷದ ಫಿಲಿಪ್ಪೊನಿ ವಿಲಿಯಮ್ಸ್ ಎಂದು ಗುರುತಿಸಲಾಗಿದ್ದು, ಈಕೆ ರೋಗಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಲಾಗಿದೆ. ಅಲ್ಲದೇ ಈಕೆ ರೋಗಿ ಅಸ್ವಸ್ಥಗೊಂಡಾಗ ಆಂಬುಲೆನ್ಸ್ ಗೆ ಅಥವಾ ಆಸ್ಪತ್ರೆ ಸಿಬ್ಬಂದಿಗೆ ಕರೆ ಮಾಡದೇ ಸ್ನೇಹಿತರನ್ನು ಕರೆದು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ರೋಗಿ ಡಯಾಲಿಸಿಸ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಸೆಕ್ಸ್ ವೇಳೆ ರೋಗಿಗೆ ಹೃದಯ ಸ್ತಂಭನವಾಗಿದೆ. ಹೃದಯಾಘಾತದ ವೇಳೆ ಕಿಡ್ನಿ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿದ್ದರಿಂದ ಸಮಸ್ಯೆ ಉಲ್ಭಣವಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *