Ad Widget .

ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ ವಿದ್ಯಾರ್ಥಿನಿ

ಸಮಗ್ರ ನ್ಯೂಸ್‌: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಿದ್ಯಾರ್ಥಿನಿ ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾಳೆ.

Ad Widget . Ad Widget .

ತೂಯಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಲಕ್ಷ್ಮಿ (11) ಕಳೆದ ತಿಂಗಳು ಜೂ. 29 ರಂದು ಮನೆ ಕಟ್ಟಲು ನಿವೇಶನ ನೀಡುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ.

Ad Widget . Ad Widget .

ಪತ್ರದ ಸಾರಾಂಶ
ನಾನು (ಲಕ್ಷ್ಮೀ) ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇವೆ. ನಾವು ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರು ತಕರಾರು ಮಾಡುತ್ತಿದ್ದಾರೆ. ಇದೇ ಗುಡಿಸಿಲನಲ್ಲಿ ವಾಸಿಸುವುದು ಅನಿವಾರ್ಯವಾಗಿದೆ.
ಇದೀಗ ನಾವು ಆತಂಕದಲ್ಲಿ ಕಾಲ ಕಳೆಯುತ್ತೆದ್ದೇವೆ. ಮನೆ ಕಟ್ಟಲು ಗ್ರಾಮ ಪಂಚಾಯತ್ ಅನುದಾನ ಬಿಡುಗಡೆ ಮಾಡಿದರೂ ಮನೆ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ದಯಮಾಡಿ ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿ ಎಂದು ವಿದ್ಯಾರ್ಥಿನಿ ಲಕ್ಷ್ಮೀ ಪತ್ರ ಬರೆದಿದ್ದಾಳೆ. ಇನ್ನು ವಿದ್ಯಾರ್ಥಿನಿ ಲಕ್ಷ್ಮೀಯನ್ನು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಭೇಟಿ ಮಾಡಿ ಅಹವಾಲು ಆಲಿಸಿದ್ದಾರೆ.

Leave a Comment

Your email address will not be published. Required fields are marked *