Ad Widget .

ಮಂಗಳೂರು: ಕೆಲಸಕ್ಕಿದ್ದ ಕಾರ್ಮಿಕನ ಕೊಲೆ|ಮಾಲೀಕ ಬಂಧನ

ಮಂಗಳೂರು : ತನ್ನ ಬಳಿ ಕೆಲಸಕ್ಕಿದ್ದ ಕಾರ್ಮಿಕನನ್ನು ಮಾಲೀಕನೇ ಬೆಂಕಿಹಚ್ಚಿ ಸುಟ್ಟು ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಮುಳಿಹಿತ್ಲು ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ.

Ad Widget . Ad Widget .

ಕೊಲೆಯಾದವನನ್ನು ಗಜ್ಞಾನ್ ಜಗು ಎಂದು ಗುರುತಿಸಲಾಗಿದ್ದು, ಅಂಗಡಿ ಮಾಲೀಕ ಪಾಂಡೇಶ್ವರ ನಿವಾಸಿ ತೌಸಿಫ್ ಹಸನ್ ( 32 ) ಕೊಲೆ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಳಿಹಿತ್ಲು ಮಾಷುಪಾ ಜನರಲ್ ಸ್ಕೋರ್ ಎಂಬ ಅಂಗಡಿಯಲ್ಲಿ ಕೆಲಸಕ್ಕಿದ್ದ ಗಜ್ಞಾನ್ ಜಗು ಎಂಬ ಕಾರ್ಮಿಕನಿಗೆ ಮಾಲೀಕ ಕ್ಷುಲ್ಲಕ ಕಾರಣಕ್ಕೆ ಬೆಂಕಿ ಹಚ್ಚಿದ್ದಾನೆ. ನಂತರ ಸಾಕ್ಷಿ ನಾಶ ಮಾಡಿ ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ತೌಸಿಫ್ ಸುಳ್ಳು ಕತೆ ಕಟ್ಟಿದ್ದಾನೆ. ಕಾರ್ಮಿಕ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದಾನೆ ಎಂದು ಸಾರ್ವಜನಿಕರಿಗೆ ಮಧ್ಯಾಹ್ನ ಸುಮಾರು 1-30 ಗಂಟೆಗೆ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಗಜ್ಞಾನನನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕರೆದುಕೊಂಡು ಹೋಗಿದ್ದಾನೆ. ಪರೀಕ್ಷಿಸಿದ ವೈ‌ದ್ಯರು ಕಾರ್ಮಿಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Ad Widget . Ad Widget .

ದಕ್ಷಿಣ ಠಾಣೆಯ ಪೊಲೀಸರು ತನಿಖೆಯನ್ನು ಆರಂಭಿಸಿ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಸಾಕ್ಷ್ಯಗಳು ಲಭ್ಯವಾಗಿದ್ದು ಇದೊಂದು ಕೊಲೆ ಪ್ರಕರಣವೆಂದು ದೃಢಪಟ್ಟಿದೆ. ಆರೋಪಿ ತೌಸಿಫ್ ನನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *