ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಆರಂಭಿಸಿರುವ ಮಹತ್ವದ ವಂದೇ ಭಾರತ್ ರೈಲುಗಳು ಇನ್ನು ಮುಂದೆ ಕೇಸರಿ ಬಣ್ಣದಲ್ಲಿ ಬರಲಿವೆ. ಆ ಕುರಿತು ಸಚಿತ್ರ ಮಾಹಿತಿ ಅಧಿಕೃತ ಮೂಲಗಳಿಂದಲೇ ಹೊರಬಿದ್ದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಈ ಕುರಿತು ಮಾಹಿತಿ ನೀಡಿದ್ದಾರೆ.
ಇಂದು ಟ್ವಿಟರ್ನಲ್ಲಿ ಹೊಸ ವಂದೇ ಭಾರತ್ ರೈಲುಗಳ ಫೋಟೋಗಳನ್ನು ಅವರು ಹಂಚಿಕೊಂಡಿದ್ದರಿಂದ, ಹೊಸ ರೈಲುಗಳು ಕೇಸರಿ ಬಣ್ಣದಲ್ಲಿ ಬರಲಿರುವುದು ಖಚಿತಗೊಂಡಿದೆ. ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಗೆ ಭೇಟಿ ನೀಡಿ ಅಲ್ಲಿ ತಯಾರಾಗಿರುವ ಹೊಸ ರೈಲುಗಳನ್ನು ವೀಕ್ಷಿಸಿದ ಬಳಿಕ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ನೀಲಿ ಮತ್ತು ಬಿಳಿ ಬಣ್ಣದಲ್ಲಿರುವ ವಂದೇ ಭಾರತ್ ರೈಲುಗಳು ಇನ್ನು ಮುಂದೆ ಕೇಸರಿ ಮತ್ತು ಕಡುಬೂದು ಬಣ್ಣದಲ್ಲಿ ಇರಲಿವೆ. ಅದರಲ್ಲೂ ಈಗಿರುವ ನೀಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೇಸರಿ ಬಣ್ಣ ಇರಲಿರುವುದು ಕಂಡುಬಂದಿದೆ. ಅಷ್ಟಕ್ಕೂ ಬಣ್ಣ ಬದಲಾವಣೆಗೆ ಖಚಿತ ಕಾರಣ ಬಹಿರಂಗಗೊಂಡಿಲ್ಲ.