ಸಮಗ್ರ ವಾರ್ತೆ: ರಾಜ್ಯ ಸರ್ಕಾರದ ಗೃಹಜ್ಯೋತಿ ಈಗಾಗಲೇ ಸುಮಾರು 1.3 ಕೋಟಿ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯಾದ ನಂತರ ಅದಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದೆಯೇ ಇಲ್ಲವೇ ಎಂಬುದರ ಬಗ್ಗೆ (ಅರ್ಜಿಯ ಸ್ಥಿತಿ) ತಿಳಿದುಕೊಳ್ಳಲು ಸರ್ಕಾರದಿಂದ ಪ್ರತ್ಯೇಕ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದೆ.
ಅರ್ಜಿದಾರರು ತಮ್ಮ ಮೊಬೈಲ್‌ನಲ್ಲಿಯೇ ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.
ರಾಜ್ಯದಲ್ಲಿ ಕಾಂಗ್ರೆಸ್‌ನ 2ನೇ ಗ್ಯಾರಂಟಿಯಾಗಿ ಜಾರಿ ಮಾಡಲಾದ ಗೃಹಜ್ಯೋತಿ ಯೋಜನೆಗೆ (ರಾಜ್ಯದ ಎಲ್ಲ ಕುಟುಂಬಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ) ಜೂ.18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ ರಾಜ್ಯಾದ್ಯಂತ 1.3 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮತ್ತೊಂದೆಡೆ ಸುಮಾರು 8 ಸಾವಿರಕ್ಕೂ ಅಧಿಕ ಜನರು ಎರಡು ಅಥವಾ ಅದಕ್ಕಿಂತ ಹೆಚ್ಚುಬಾರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಎಲ್ಲರೂ ತಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಲು ಅನುಕೂಲ ಆಗುವಂತೆ ಸರ್ಕಾರದಿಂದ ಪ್ರತ್ಯೇಕ ಲಿಂಕ್ ನೀಡಲಾಗಿದೆ.
ಅರ್ಜಿ ಸ್ಥಿತಿ ಪರಿಶೀಲನೆ ಲಿಂಕ್ ಇಲ್ಲಿದೆ : ಸರ್ಕಾರದಿಂದ ಬಿಡುಗಡೆ ಮಾಡಲಾದ https://sevasindhu.karnataka.gov.in/StatucTrack/Track_Status ಲಿಂಕ್ ಕ್ಲಿಕ್ ಮಾಡುವ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದವರು ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ತಮ್ಮ ಅರ್ಜಿಯನ್ನು ಸರ್ಕಾರದಿಂದ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದಲ್ಲಿ ‘Gruhajyothi scheme your application successful’ ಎಂದು ತೋರಿಸಲುತ್ತದೆ. ಇಲ್ಲವಾದಲ್ಲಿ ‘your application for Gruhajyothi scheme is received and sent to ESCOM for processing’ ಎಂದು ತೋರಿಸುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದಲ್ಲಿ ‘your application rejected’ ಎಂದು ತೋರಿಸುತ್ತದೆ.
ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಮಾಡದ ಫಲಾನುಭವಿಗಳು https://sevasindhugs.karnataka.gov.in/gsdn/ ಲಿಂಕ್ ಕ್ಲಿಕ್ ಮಾಡಿ ಈಗಲೂ ಅರ್ಜಿ ಸಲ್ಲಿಕೆ ಮಾಡಬಹುದು. ಜುಲೈ 25ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಮಾತ್ರ ಆಗಸ್ಟ್ ತಿಂಗಳಲ್ಲಿ ಬರುವ ವಿದ್ಯುತ್ ಬಿಲ್ ಪಾವತಿ ನಿಮಗೆ ಉಚಿತವಾಗಲಿದೆ. ಇಲ್ಲವಾದಲ್ಲಿ ನೀವು ಅರ್ಜಿ ಸಲ್ಲಿಕೆ ಮಾಡುವವರೆಗೂ ವಿದ್ಯುತ್ ಉಚಿತ ಲಭ್ಯವಾಗುವುದಿಲ್ಲ. ಇನ್ನು 200 ಯೂನಿಟ್‌ನಿಂದ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದಲ್ಲಿ ಪೂರ್ಣವಾಗಿ ಬಿಲ್ ಪಾವತಿಸಬೇಕು.. ಆದರೆ, ಸರ್ಕಾರದಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ.