ಸಮಗ್ರ ನ್ಯೂಸ್ : ಬೆಳ್ತಂಗಡಿ ತಾಲೂಕಿನ ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಹರೀಶ್ ರವರು ಜು.8ರಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ವೇಳೆ ಸುಬ್ರಹ್ಮಣ್ಯ ರವಿ ಕಕ್ಕೆ ಪದವು ಸೇವಾ ಟ್ರಸ್ಟಿನ ಸಂಸ್ಥಾಪಕರಾದ ರವಿ ಕಕ್ಕೆ ಪದವು ಶ್ರೀ ದೇವಳಕ್ಕೆ ಬರಮಾಡಿಕೊಂಡಿದ್ದು, ಆ ಹೊತ್ತಿಗಾಗಲೆ ಸುಮಾರು ನೂರಕ್ಕೂ ಹೆಚ್ಚು ಜನ ಅರಿಕೋಡಿ ದೇವಸ್ಥಾನದ ಭಕ್ತಾದಿಗಳು ಧರ್ಮದರ್ಶಿಗಳನ್ನ ಎದುರುಗೊಂಡರು.
ಶ್ರೀ ದೇವಳಕ್ಕೆ ಆಗಮಿಸಿದ ಧರ್ಮದರ್ಶಿಗಳು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದು ಪ್ರಸಾದ ಸ್ವೀಕರಿಸಿದರು .ತದನಂತರ ರವಿ ಕಕ್ಕೆ ಪದವು ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅರಿಕೋಡಿ ದೇವಸ್ಥಾನದ ಭಕ್ತಾದಿಗಳು ಹಾಗೂ ನೆರೆಕೆರೆಯವರು ಸೇರಿ ಧರ್ಮದರ್ಶಿಗಳನ್ನ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಧರ್ಮದಶಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ ಎಣ್ಣೆಮಜಲ್, ಸೀನಿಯರ್ ಚೇಂಬರ್ ನ ಅಧ್ಯಕ್ಷ ವಿಶ್ವನಾಥ ನಡುತೋಟ, ಸೇವಾ ಟ್ರಸ್ಟಿನ ಸಂಸ್ಥಾಪಕ ಡಾl ರವಿಕಕ್ಕೆ ಪದವು, ಟ್ರಸ್ಟಿನ ಸದಸ್ಯರುಗಳು, ಪ್ರಕಾಶ್ ಕುಂದಾಪುರ, ಸಚಿನ್ ನಾಯ್ಕ್, ನೆರೆಕರೆಯವರು, ಹಾಗೂ ರವಿ ಕಕ್ಕೆ ಪದವು ಮನೆಯವರು ಉಪಸ್ಥಿತರಿದ್ದರು.