Ad Widget .

ಕರಾವಳಿಯಲ್ಲಿ ಮತ್ತೆ ಬಿರುಸು ಪಡೆದ ಮಳೆ

ಸಮಗ್ರ ನ್ಯೂಸ್ : ಕರಾವಳಿ ಭಾಗದಲ್ಲಿ ನಿನ್ನೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಪ್ರಾರಂಭವಾಗಿದೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಮತ್ತೆ ಮುಂದುವರೆದಿದೆ.

Ad Widget . Ad Widget .

ನಿನ್ನೆ ಶುಕ್ರವಾರ ಹಗಲು ಮಳೆ ಸ್ವಲ್ಪ ಮಟ್ಟಿನ ವಿರಾಮ ಪಡೆದಿತ್ತು, ಆದರೆ ರಾತ್ರಿ ಇಡೀ ಧಾರಾಕಾರ‌ ಮಳೆಯಾಗಿದ್ದು, ಶನಿವಾರವೂ ಜಿಲ್ಲೆಯಾದ್ಯಂತ ಬಿರುಸಿನ‌ ಮಳೆಯಾಗುತ್ತಿದೆ. ಮಳೆಯಿಂದಾಗಿ‌ ಮಂಗಳವಾರ ವಾರದಿಂದ ಶುಕ್ರವಾರದವರೆಗರ ಜಿಲ್ಲಾಡಳಿತವು ಶಾಲೆಗಳಿಗೆ ರಜೆ‌ ನೀಡಿತ್ತು. ಶನಿವಾರ ಶಾಲೆಗಳು ಪುನರಾರಂಭಗೊಂಡಿವೆ.

Ad Widget . Ad Widget .

ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ ರಸ್ತೆಗೆ ಮರ ಬಿದ್ದಿದ್ದು, ರಾತ್ರಿಯೇ ಅದನ್ನು ತೆರೆವುಗೊಳಿಸಲಾಯಿತು. ಉಳ್ಳಾಲ ನಗರಸಭೆ ವ್ಯಾಪ್ತಿಯ ಸೇವಂತಿ ಗುಡ್ಡೆಯಲ್ಲಿ ಗುಡ್ಡ ಜರಿದು ಭಾರಿ ಗಾತ್ರದ ಕೆಂಪುಕಲ್ಲು ಉರುಳಿ ಬಿದ್ದಿದ್ದು, ರಾತ್ರಿಯೇ‌ ಅದನ್ನು ತೆರವುಗೊಳಿಸಲಾಯಿತು.

Leave a Comment

Your email address will not be published. Required fields are marked *