ಸಮಗ್ರ ನ್ಯೂಸ್: ಜುಲೈ 10 ರಂದು ಸೋಮವಾರ ಅನ್ನಭಾಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ. ಈ ಮೂಲಕ ಪಡಿತರದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವರು ಜುಲೈ 10 ರಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. 15 ದಿನದಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಯನ್ನು ಶುರು ಮಾಡಲು ಸರ್ಕಾರ ಉದ್ದೇಶಿಸಿತ್ತಾದರೂ ನಾನಾ ಕಾರಣಗಳು ಮುಂದೆ ಬಂದು ಅಕ್ಕಿ ಜನರಿಗೆ ತಲುಪಿಲ್ಲ. ಬದಲಾಗಿ, ನೇರವಾಗಿ ಜನರ ಖಾತೆಗೆ ಹಣ ಬರುವಂತೆ ಮಾಡಲಾಗುವುದು ಎನ್ನಲಾಗಿತ್ತು. ಇದೀಗ ಆ ಹಣ ಯಾವತ್ತು ಜನರ ಖಾತೆಗೆ ಬರಲಿದೆ ಎನ್ನುವ ವಿಚಾರವನ್ನು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಬಿಚ್ಚಿಟ್ಟಿದ್ದಾರೆ.
‘ನೇರವಾಗಿ ಅವರವರ ಖಾತೆಗಳಿಗೆ 15 ದಿನಗಳಲ್ಲಿ ಹಣ ಹಾಕುತ್ತೇವೆ. ಒಟ್ಟು 1 ಕೋಟಿ 29 ಲಕ್ಷ ಕಾರ್ಡ್ಗಳಿದ್ದು, 4 ಕೋಟಿ 41 ಲಕ್ಷ ಜನರಿಗೆ 800 ಕೋಟಿ ರೂ.ವರೆಗೂ ಹಣ ಬೇಕಾಗಲಿದೆ. ತೆಲಂಗಾಣ ಛತ್ತಿಸ್ಘಡದವರು ಅಕ್ಕಿ ನೀಡಲು ಒಪ್ಪಿದ್ದು ಸಂಪರ್ಕದಲ್ಲಿದ್ದಾರೆ. ಅವರಿಂದ ನಾವು ಅಕ್ಕಿಯನ್ನು ಖರೀದಿ ಮಾಡಿ ಆದಷ್ಟು ಬೇಗ ವಿತರಣೆ ಮಾಡುತ್ತೇವೆ’ ಎಂದು ಸಚಿವರು ಹೇಳಿದ್ದಾರೆ.