ಉಡುಪಿ : ದೇವಸ್ಥಾನದ ಪೂಜೆಗೆ ಹೊರಟ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು..!

ಸಮಗ್ರ ನ್ಯೂಸ್: ಕುಂದಾಪುರದಲ್ಲಿರುವ ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟ ವ್ಯಕ್ತಿಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.5ರಂದು ನಡೆದಿದೆ.

Ad Widget ... ..

ಶೇಷಾದ್ರಿ ಐತಾಳ್ ಮೃತ ವ್ಯಕ್ತಿ, ಇವರು ಕಮಲ ಶಿಲೆ ದೇವಳಕ್ಕೆ ಪೂಜೆಗೆಂದು ಆಗಮಿಸಿದ್ದು ಈ ವೇಳೆ ಕಮಲಶಿಲೆ ದೇವಾಲಯದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿಗೆ ಇಳಿದ ಸಂದರ್ಭ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

Ad Widget

ನದಿಗೆ ಬಿದ್ದ ಜಾಗದ ಸುಮಾರು ನೂರು ಮೀಟರ್ ದೂರಲ್ಲಿ ಶವ ಪತ್ತೆಯಾಗಿದ್ದು, ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡದಿಂದ ಶವ ಪತ್ತೆ ಕಾರ್ಯ ನಡೆಸಿದೆ. ಈ ಪ್ರಕರಣ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *