ಉಳ್ಳಾಲ: ಭಾರೀ ಗಾಳಿ- ಮಳೆಗೆ ಉರುಳಿ ಬಿದ್ದ ಮೇಲ್ಛಾವಣಿ ಶೀಟ್ | ರಜೆ ಕಾರಣ ತಪ್ಪಿ ಅನಾಹುತ

ಸಮಗ್ರ ನ್ಯೂಸ್ : ಭಾರೀ ಗಾಳಿ ಮಳೆಗೆ ತಲಪಾಡಿಯಲ್ಲಿರುವ ಶಾರದಾ ವಿದ್ಯಾಲಯ ಕಟ್ಟಡದ ಮೇಲೆ ಅಳವಡಿಸಿದ್ದ ಶೀಟ್‌ ಚಾವಣಿ ಕೆಳಗೆ ಬಿದ್ದ ಘಟನೆ ನಡೆದಿದೆ.

Ad Widget ... ..

ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಆರು ಮಹಡಿಯ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಇದನ್ನು ಅಳವಡಿಸಲಾಗಿತ್ತು. ಸತತ ಗಾಳಿ ಮಳೆ ಕಾರಣದಿಂದಾಗಿ ಜು.6ರ ಬೆಳಿಗ್ಗೆ 9 ಗಂಟೆ ಸಂದರ್ಭ ಶೀಟ್ ಕೆಳಗೆ ಬಿದ್ದಿದೆ. ಮೇಲ್ಚಾವಣೆಗೆ ಹಾಕಲಾಗಿದ್ದ ರಾಡ್ ಗಳೂ ಕೂಡ ಕೆಳಗೆ ಬಿದ್ದಿದ್ದು, ಇದರಿಂದಾಗಿ ಹಲವು ವಾಹನಗಳು ಜಖಂಗೊಂಡಿವೆ.

Ad Widget

ಭಾರಿ ಮಳೆ ಕಾರಣ ಸತತ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಿಗೆ ಜಿಲ್ಲಾ ಆಡಳಿತ ರಜೆ ಘೋಷಿಸಿದೆ. ಹೀಗಾಗಿ ಈ ಶಾಲೆಗೂ ರಜೆ ಇದ್ದ ಕಾರಣ ಡೊಡ್ಡ ಅನಾಹುತ ತಪ್ಪಿದೆ.

Leave a Comment

Your email address will not be published. Required fields are marked *