Ad Widget .

ಸುಳ್ಯ: ಪರ್ಮಿಟ್ ಇಲ್ಲದ ಖಾಸಗಿ ಬಸ್ ಗಳಿಗೆ ಮುಟ್ಟುಗೋಲು ಹಾಕಿದ ಸಾರಿಗೆ ಅಧಿಕಾರಿಗಳು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅತೀ ಹಳೆಯದಾದ ಪರ್ಮಿಟ್ ಹೊಂದಿದ್ದ ಸುಳ್ಯ – ಮಂಡೆಕೋಲು ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಸುಗಳು ಧಿಡೀರ್ ಆಗಿ ಸೋಮವಾರ ಮುಂಜಾನೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಸೀಝ್ ಮಾಡಲಾಗಿದೆ ಎಂದು ಪುತ್ತೂರು ಆರ್ ಟಿ ಓ ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಈ ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು – ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಅಲ್ಲದೇ ಕೆಎ-19-ಸಿ-0329 ಎಂಬ ಸಂಖ್ಯೆಯ ಇನ್ನೊಂದು ಬಸ್ಸು ಸುಮಾರು ಮೂವತ್ತೋಂಬತ್ತು ಸಾವಿರ ಟ್ಯಾಕ್ಸ್ ಉಳಿಕೆ ಮಾಡಿಕೊಂಡಿದ್ದು, ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಬಸ್ಸುಗಳನ್ನು ಓಡಿಸುತ್ತಿರುವ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ದೂರು ಕೇಳಿಬಂದಿದೆ.

Ad Widget . Ad Widget .

ಈ ಹಿನ್ನಲೆಯಲ್ಲಿ ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿ ಈ ಎರಡು ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಸೀಝ್ ಆಗಿರುವ ಬಸ್ಸುಗಳು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಪೋಲೀಸ್ ಸುಪರ್ದಿಗೆ ನೀಡಲಾಗಿದೆ. ಈ ಕುರಿತಂತೆ ಕಾನೂನು ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಹಾಗೂ ಪರವಾನಿಗೆ ಹೊಂದಿದ ಮಾಲಕರು ನೋಟಿಸ್ ಗೆ ಉತ್ತರ ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಆರ್ ಟಿ ಓ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಬಸ್ಸಿನ ಚಾಲಕರು ಯಾರ ಬಸ್ಸು ಹಾಗೂ ಬಸ್ಸಿನ ಯಾವುದೇ ಪರವಾನಿಗೆ ಪತ್ರ ನೀಡದೇ ಇರುವ ಹಿನ್ನಲೆಯಲ್ಲಿ ಈ ಬಸ್ಸುಗಳನ್ನು ಸೀಝ್ ಮಾಡಲಾಗಿದೆ ಎಂದು ಅಧಿಕಾರಿಗಳಾದ ವಿಶ್ವನಾಥ್ ಅಜಿಲ , ಹಾಗೂ ದೀಪಕ್ ರವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *