ಸಮಗ್ರ ನ್ಯೂಸ್ : ಮಧ್ಯವಯಸ್ಸಿನ ಜೋಡಿಯ ರಾಸಕ್ರೀಡೆಯ ವಿಡಿಯೋ ವೈರಲ್ ಬಳಿಕ ವಿಡಿಯೋದಲ್ಲಿದ್ದ ವ್ಯಕ್ತಿಯ ಪುತ್ರ ಆತ್ಮಹತ್ಯೆಗೆ ಶರಣಾಗಿರುವ ಬೆನ್ನಲ್ಲೇ ವಿಡಿಯೋ ಮಾಡಿ ಬಳಿಕ ವಿಡಿಯೋ ವೈರಲ್ ಮಾಡಿದ್ದ ಆರೋಪಿಯನ್ನು ಮೂಡಬಿದ್ರಿ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಯಕುಮಾರ್ ಎಂದು ಗುರುತಿಸಲಾಗಿದೆ.
ಕೆಲ ಸಮಯದ ಹಿಂದೆಯೇ ಘಟನೆಯ ವಿಡಿಯೋ ಚಿತ್ರೀಕರಣವಾಗಿದೆ ಎನ್ನಲಾಗುತ್ತಿದ್ದು, ವಿಡಿಯೋ ಚಿತ್ರೀಕರಿಸಿದ ಆರೋಪಿ ವಿಡಿಯೋದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ಕೂಡ ಸುಲಿಗೆ ಮಾಡಿದ್ದ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಅಲ್ಲದೇ ಹಣ ಪಡೆದ ಬಳಿಕವೂ ಹೆಚ್ಚಿನ ಹಣಕ್ಕಾಗಿ ತಾಕೀತು ಮಾಡಿದ್ದು, ವಿಡಿಯೋದಲ್ಲಿದ್ದ ವ್ಯಕ್ತಿ ಹಣ ನೀಡಲು ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಆರೋಪಿ ವಿಡಿಯೋ ವೈರಲ್ ಮಾಡಿದ್ದ ಎಂಬ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಲೇ ಇಳಿ ವಯಸ್ಸಿನ ಮಹಿಳೆ, ಯುವಕನ ತಂದೆ ಹಾಗೂ ಯುವಕ ಮುಜುಗರ ಅನುಭವಿಸಿದ್ದರು. ಅಲ್ಲದೆ ಯುವಕ ತಂದೆಯೊಂದಿಗೆ ಇದೇ ವಿಚಾರವಾಗಿ ಜಗಳವಾಡಿದ್ದ ಎನ್ನಲಾಗಿದೆ. ಯುವಕ ಮೂಡಬಿದಿರೆಯ ಶೋರೂಂ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿದ ಕಾರಣ ತೀವ್ರ ಮುಜುಗರ, ಮಾನಸಿಕ ವೇದನೆ ಅನುಭವಿಸಿದ್ದ ಎನ್ನಲಾಗಿದೆ. ಅಲ್ಲದೇ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ.
ಸದ್ಯ ವಿಡಿಯೋ ವೈರಲ್ ಮಾಡಿದ ಜಯಕುಮಾರ್ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದು, ವಿಡಿಯೋ ವೈರಲ್ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.