ಕುರುಂಜಿಬಾಗ್ ದ ಕೊರಗಜ್ಜ ವಿಡೀಯೋ ತುಳು ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಚಿತ್ತೆಶ್ ಕ್ರಿಯೇಷನ್ಸ್ ಸುಳ್ಯ ಅರ್ಪಿಸುವ ಕುರುಂಜಿಬಾಗ್ ದ ಕೊರಗಜ್ಜ ವೀಡಿಯೋ ತುಳು ಭಕ್ತಿಗೀತೆಯನ್ನು ಕುರುಂಜಿಬಾಗ್ ನಲ್ಲಿರುವ ಶ್ರೀ ಕೊರಗಜ್ಜ ದೇವಾಲಯದಲ್ಲಿ ಬಿಡುಗಡೆ ಮಾಡಲಾಯಿತು.

Ad Widget ... ..

ದೇವಸ್ಥಾನದ ಅರ್ಚಕರಾಗಿರುವ ಶ್ರೀ ನಾರಾಯಣ ಪೂಜಾರಿ ಯವರು ಭಕ್ತಿಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು .ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ ಸಾಹಿತಿಗಳು ಮತ್ತು ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

Ad Widget

ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ್ ಪೂಜಾರಿಯವರು ಮುಖ್ಯ ಅತಿಥಿಗಳಾಗಿದ್ದರು . ಈ ಭಕ್ತಿಗೀತೆಗೆ ಸಾಹಿತ್ಯ ರಚಿಸಿ ಹಾಡಿರುವ ಪುಷ್ಪಾವತಿ ಆರ್ ಡಿ ಎಡಮಂಗಲ ರವರು ಸರ್ವರನ್ನು ಸ್ವಾಗತಿಸಿದರು . ಈ ಭಕ್ತಿಗೀತೆಗೆ ಸಹಕಾರ ನೀಡಿದ ಐವರ್ನಾಡಿನ ಪೆರುಮಾಳ್ ಲಕ್ಷ್ಮಣ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಬಿಡುಗಡೆಯಾದ ಭಕ್ತಿಗೀತೆಯನ್ನು ಪ್ರದರ್ಶನ ಮಾಡಲಾಯಿತು.

ತುಳುನಾಡ ಕಾರ್ನಿಕದ ದೈವ ಕೊರಗಜ್ಜನ ಭಕ್ತಿಗೀತೆ’ ಬಿಡುಗಡೆ ಸಂದರ್ಭದಲ್ಲಿ ಗೀತಾ ಸುಳ್ಯ , ಕುಸುಮ ಸುಳ್ಯ , ಜಯಂತಿ ಕೇರ್ಪಳ , ಶೋಭಾ ಪೈಚಾರು , ಕುರುಂಜಿಬಾಗ್ ನ ರತ್ನಾವತಿ , ಸುಶೀಲಾ , ಪ್ರವೀಣ್ , ವಿಜೇತಾ , ಪ್ರತೀಕಾ , ಪುಷ್ಪಾವತಿ , ಪ್ರಮೋದ್ ,ಪ್ರಶಾಂತ್ , ನವೀನ್, ವೀಣಾ , ಪವಿತ್ರಾ , ವಾಣಿ , ಮಾ|ಮನ್ವಿತ್ , ಮಾ | ತನ್ವಿತ್ ಇನ್ನಿತರರು ಉಪಸ್ಥಿತರಿದ್ದರು .

Leave a Comment

Your email address will not be published. Required fields are marked *