Ad Widget .

ಪಬ್‌ ಜೀ ಗೇಮ್‌ ಮೂಲಕ ಪರಿಚಯ|ಪ್ರಿಯಕರನಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ.!

ಸಮಗ್ರ ನ್ಯೂಸ್: ಪಬ್‌ ಜೀ ಗೇಮ್‌ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತಕ್ಕೆ ಬಂದಿರುವ ಘಟನೆ ನಡೆದಿದೆ.

Ad Widget . Ad Widget .

ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಜನಪ್ರಿಯ ಮೊಬೈಲ್‌ ಗೇಮ್‌ ಪಬ್‌ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದಾರೆ.

Ad Widget . Ad Widget .

ಇನ್ನು ಆ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದು, ಆಕೆ ಪಾಕಿಸ್ತಾನ ಮೂಲದವಳು ಆಗಿದ್ದಾಳೆ ಎನ್ನುವುದು ಅರಿತುಕೊಂಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್‌ ಮಾಡತೊಡಗಿದ್ದಾರೆ. ಹೀಗೆ ಪಾಕ್‌ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಗುಲಾಮ್ ಹೈದರ್ ಯೊಂದಿಗೆ ಪ್ರೇಮಾಂಕುರ ಆಗಿದ್ದು, ಅತ್ತ ಕಡೆಯಿಂದ ಸೀಮಾ ಕೂಡ ಸಚಿನ್‌ ನನ್ನು ಪ್ರೀತಿಸ ತೊಡಗಿದ್ದಾರೆ. ಇದಾದ ಬಳಿಕ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ನೇಪಾಳದ ಮೂಲಕ ಭಾರತಕ್ಕೆ ಬಂದು ಸಚಿನ್‌ ಇರುವ ಗ್ರೇಟರ್‌ ನೋಯ್ಡಾಕ್ಕೆ ಬಂದಿದ್ದಾರೆ.

ಸಚಿನ್‌ ಹಾಗೂ ಸೀಮಾ ಗ್ರೇಟರ್‌ ನೋಯ್ಡಾದ ರಬುಪುರ ಪ್ರದೇಶದ ಒಂದು ಅಪಾರ್ಟ್‌ ಮೆಂಟ್‌ ನಲ್ಲಿ ಬಾಡಿಗೆ ನಿವಾಸಿಯಾಗಿ ವಾಸಿಸಲು ಶುರು ಮಾಡಿದ್ದಾರೆ.

ಪೊಲೀಸರು ಪಾಕಿಸ್ತಾನದ ಮಹಿಳೆಯೊಬ್ಬಳು ಅಕ್ರಮವಾಗಿ ನೋಯ್ಡಾದಲ್ಲಿ ನೆಲೆಸಿದ್ದಾಳೆ ಎನ್ನುವ ಮಾಹಿತಿಯನ್ನು ಪಡೆದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಚಿನ್‌ – ಸೀಮಾ ಹಾಗೂ ಅವರ ಮಕ್ಕಳನ್ನು ಹಿಡಿದುಕೊಂಡು ನೋಯ್ಡಾದಿಂದ ಪರಾರಿಯಾಗಿದ್ದಾರೆ.

ಸದ್ಯ ಪೊಲೀಸರು ಸಚಿನ್‌ ಹಾಗೂ ಸೀಮಾರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Leave a Comment

Your email address will not be published. Required fields are marked *