Ad Widget .

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಜು. 2ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Ad Widget . Ad Widget .

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ಚೇತನ್​ ಕಂಪೆನಿಯೊಂದರ ಮಾಲೀಕನಾಗಿದ್ದು, ಇತ್ತೀಚೆಗೆ ಚೇತನ್​ಗೆ ಮತ್ತೊರ್ವ ಯುವತಿಯ ಸಂಪರ್ಕ ಬೆಳೆದಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ತನ್ನ ತಾಯಿ ಪದ್ಮಮ್ಮ ಬಳಿ ಪವಿತ್ರ ತಿಳಿಸಿದ್ದಳು.

Ad Widget . Ad Widget .

ಎಷ್ಟೇ ಹೇಳಿದರೂ ಗಂಡನ ಬುದ್ಧಿ ಬದಲಾಗದ ಹಿನ್ನೆಲೆಯಲ್ಲಿ ಕಡೆಗೆ ಮನನೊಂದು, ಡೆತ್​ನೋಟ್ ಬರೆದು, ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಿ ಸಾವಿಗೆ ಶರಣಾಗಿದ್ದಾಳೆ. ಮಗಳ ಸ್ಟೇಟಸ್​ನಲ್ಲಿದ್ದ ಡೆತ್​ನೋಟ್ ನೋಡಿ ತಾಯಿ ಪದ್ಮಮ್ಮ ಮನೆಗೆ ಬಂದಾಗ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಸದ್ಯ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಎಫ್​ಐಆರ್ ದಾಖಲಾಗಿದೆ. ಮೃತಳ ತಾಯಿ ಪದ್ಮಮ್ಮ ಅವರ ದೂರಿನನ್ವಯ ಐಪಿಸಿ ಸೆಕ್ಷನ್​ 306ರ ಅಡಿಯಲ್ಲಿ ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಾಗಿದ್ದು, ಡೆತ್​ನೋಟ್ ಹಾಗೂ ಮೃತಳ ಎರಡು ಪೋನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *