Ad Widget .

ಬಿಟ್ ಕಾಯಿನ್ ಹಗರಣ| ಶ್ರೀಕಿ ಹೆಗಲ ಮೇಲೆ ಬಂದೂಕು… ಗುರಿ ಎಲ್ಲಿಗೆ..?

ಸಮಗ್ರ ವಿಶೇಷ: ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಾಕಷ್ಟು ಆರೋಪಗಳಿಗೆ ತುತ್ತಾಗಿತ್ತು. ಅದರಲ್ಲಿ ಒಂದು ಬಿಟ್ ಕಾಯಿನ್ ಹಗರಣ. ಇದು ಜನಸಾಮಾನ್ಯರಿಗೆ ಕೊಂಚ ಅರ್ಥವಾಗದ ಲೆಕ್ಕಾಚಾರ ಆಗಿದ್ದರೂ ಹಗರಣ ಎನ್ನುವುದೇ ಪ್ರಮುಖ ಸಂಗತಿ. ಹಣದ ಬದಲಿ ರೂಪ ಎನ್ನಬಹುದು. ಆನ್ಲೈನ್ ವ್ಯವಹಾರ ಮಾಡುವ ಸಂಸ್ಥೆಗಳು ಹಣದ ಬದಲಿಗೆ ಬಿಟ್ಕಾಯಿನ್ ಬಳಸುತ್ತಾರೆ. ಇಂದಿನ ಬಿಟ್ ಕಾಯಿನ್ ದರ 25,32,205 ರೂಪಾಯಿ ಆಗಿದೆ. ಸರ್ಕಾರ ಸೇರಿದಂತೆ ಹತ್ತಾರು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ, ಹಣ ಮಾಡುವುದು ಸದ್ಯಕ್ಕೆ ನಡೆಯುತ್ತಿರುವ ದಂಧೆ. ಬಿಟ್ ಕಾಯಿನ್ ಹ್ಯಾಕ್ ಮಾಡಲು ಬಿಜೆಪಿ ನಾಯಕರು ಬಳಸಿಕೊಂಡಿದ್ದು ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ. ಶ್ರೀಕಿ ಹ್ಯಾಕ್ ಮಾಡೋದ್ರಲ್ಲಿ ಎಕ್ಸ್ಫರ್ಟ್ ಆಗಿದ್ದು, ಅಮೆರಿಕದ ಕೆಲವು ಕಂಪನಿಗಳ ವೆಬ್ಸೈಟ್ ಹ್ಯಾಕ್ ಮಾಡಿ ಬಿಟ್ ಕಾಯಿನ್ ಕಳವು ಮಾಡಿದ ಕೇಸ್ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

CBI ಮುಖ್ಯಸ್ಥರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ..!?
ಹಾಲಿ ಸಿಬಿಐ ಮುಖ್ಯಸ್ಥರಾಗಿರುವ ಪ್ರವೀಣ್ ಸೂದ್, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕರ್ನಾಟಕದ DG IGP ಆಗಿದ್ದರು. ಅಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಕಣ್ಣಾರೆ ಕಂಡಿದ್ದ ಪ್ರವೀಣ್ ಸೂದ್, ಎಲ್ಲರನ್ನೂ ಆರೋಪಗಳಿಂದ ಮುಕ್ತ ಮಾಡುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಪ್ರವೀಣ್ ಸೂದ್ ಕೂಡ ಬಿಟ್ ಕಾಯಿನ್ ಪ್ರಕರಣದಲ್ಲಿ ತನಿಖೆ ಎದುರಿಸಬೇಕಾದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸೂದ್ ಅಷ್ಟೇ ಅಲ್ಲದೆ ಈಗ ಹಾಲಿ ಪ್ರಮುಖ ಪೋಸ್ಟ್ಗಳಲ್ಲಿ ಇರುವ ಪೊಲೀಸ್ ಅಧಿಕಾರಿಗಳಿಗೂ ಸಂಕಷ್ಟದ ಸಂಕೋಲೆ ಭೀತಿ ಶುರುವಾಗಿದೆ. ಯಾರೆಲ್ಲಾ ಬಿಜೆಪಿ ಸರ್ಕಾರದಲ್ಲಿ ಹಗರಣಗಳಿಗೆ ಸಾಥ್ ಕೊಟ್ಟಿದ್ದರೂ ಅವರೆಲ್ಲರೂ ಸಿಕ್ಕಿ ಬೀಳುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಸಿಐಡಿ ತನಿಖೆಗೆ ವಹಿಸಿದರೆ ಕಳ್ಳರ ಕೈಗೆ ಕೀಲಿ ಕೊಟ್ಟಂತೆ ಎಂದಿದ್ದಾರೆ. SIT ಟೀಂ ರಚನೆ ಮಾಡಿ, ಯಾರೆಲ್ಲಾ ಭಾಗಿದಾರರು ಅವರನ್ನು ಜೈಲಿಗೆ ಕಳುಹಿಸುವ ಸಿದ್ಧತೆಗಳು ನಡೆದಿವೆ.

Ad Widget . Ad Widget . Ad Widget .

ರಾಜ್ಯ ಬಿಜೆಪಿ ನಾಯಕರ ಜೊತೆ ಕೇಂದ್ರಕ್ಕೂ ಕಳಂಕ..!
ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗು ರಾಜ್ಯ ಬಿಜೆಪಿ ಅಧ್ಯಕ್ಷರು ಸೇರಿದಂತೆ ಹಲವರ ಹೆಸರುಗಳು ತೇಲಿ ಬಂದಿದ್ದವು. ಆದರೆ ಈ ಹಗರಣದಲ್ಲಿ ತನಿಖೆ ಏನಾಯ್ತು..? ಆರೋಪಿಗಳನ್ನು ಯಾಕೆ ಶಿಕ್ಷೆಗೆ ಗುರಿ ಮಾಡಲಿಲ್ಲ ಎನ್ನುವುದು ಆಶ್ಚರ್ಯ ತರಿಸುವ ಸಂಗತಿ. ಆದರೆ ಇದೀಗ ಕಾಂಗ್ರೆಸ್ ಸರ್ಕಾರ SIT ತಂಡ ರಚನೆ ಮಾಡಿ ರಾಜ್ಯ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ. ಈ ಹಿಂದೆ ಹಗರಣದಲ್ಲಿ ಸಹಕರಿಸಿದ ಕೇಂದ್ರ ಬಿಜೆಪಿ ನಾಯಕರಿಗೂ ಸಂಕಷ್ಟದ ಬಿಸಿ ತಟ್ಟುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈಗಾಗಲೇ ಗೃಹ ಸಚಿವ ಡಾ ಜಿ ಪರಮೇಶ್ವರ್, ನಗರದ ಪೊಲೀಸ್ ಕಮಿಷನರ್ ಬಿ ದಯಾನಂದ್ ಹಾಗು DG ಜೊತೆಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದಾರೆ. ಬಿಟ್ ಕಾಯಿನ್ ಹಗರಣ ಸಂಬಂಧ ಮಹತ್ವದ ಚರ್ಚೆ ನಡೆಸಿದ್ದು, ತನಿಖೆ ನಡೆಸಿದಾಗ ಯಾರಿಗೆಲ್ಲಾ ಉರುಳು ಆಗಬಹುದು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ.

ತಾಂತ್ರಿಕವಾಗಿಯೂ ರಾಜ್ಯ ಸರ್ಕಾರದ ತಯಾರಿ..!
ಗೃಹಸಚಿವರ ಜೊತೆ ಬಿಟ್ ಕಾಯಿನ್ ಹಗರಣದ ಬಗೆಗಿನ ಸಭೆ ಮುಗಿಸಿದ ಬಳಿಕ ಡಿಜಿಪಿ ಅಲೋಕ್ ಮೋಹನ್ ಸಭೆಯ ಬಗ್ಗೆ ಮಾತನಾಡಿಲ್ಲ. ಪೊಲೀಸ್ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ FSL ಡೈರೆಕ್ಟರ್ ಧರ್ಮೆಂದ್ರ ಕುಮಾರ್ ಮೀನಾ ಜೊತೆಗೂ ಡಾ ಜಿ ಪರಮೇಶ್ವರ್ ಸಭೆ ಮಾಡಿದ್ದಾರೆ. ಬಿಟ್ ಕಾಯಿನ ಪ್ರಕರಣ ಆರೋಪಿ ಶ್ರೀಕಿ ಬಗ್ಗೆ ಇರುವ ಸಾಕ್ಷಿ ಮತ್ತು ಬಿಟ್ ಕಾಯಿನ್ ಪ್ರಕರಣದಲ್ಲಿ ಸಾಕ್ಷಿಯಾಗಿರೋ ತಾಂತ್ರಿಕ ಅಂಶಗಳ ಏನೇನು ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಆ ಬಳಿಕ ಮಾತನಾಡಿರುವ ಪರಮೇಶ್ವರ್, ಬಿಟ್ ಕಾಯಿನ ವಿಚಾರ ಮತ್ತು ಘಟನೆ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತೇವೆ. ಬಿಟ್ ಕಾಯಿನ್ ಹಗರಣ ಸಂಬಂಧ ಎರಡು ಬಾರಿ ಸಭೆ ಮಾಡಿದ್ದೇನೆ. ಟೆಕ್ನಿಕಲ್ ಆಗಿ ಯಾರಿಗೆಲ್ಲ ಹಣ ಹೋಗಿದೆ. ಇಲ್ಲೀಗಲ್ ಆಗಿ ಸಾವಿರಾರು ಕೋಟಿ ಹಣ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಕಲೆ ಹಾಕಲಾಗಿದೆ. ಕೆಲವೊಂದು ವಿಚಾರಗಳನ್ನು ಹೇಳಲು ಆಗಲ್ಲ, ಹಗರಣದ ಬಗ್ಗೆ ಬೆಳಕು ಚೆಲ್ಲುತ್ತೇವೆ ಎಂದಿದ್ದಾರೆ.

ಲೋಕಸಭೆಗೂ ಮುನ್ನವೇ ಬಿಟ್ ಕಾಯಿನ್ ಅಸ್ತ್ರ..!
ಡಿಜಿಪಿ ಅಲೋಕ್ ಮೋಹನ್ ಉಸ್ತುವಾರಿಯಲ್ಲೇ ಬಿಟ್ ಕಾಯಿನ್ ಹಗರಣದ ತನಿಖೆ ನಡೆಯಲಿದ್ದು, ಪ್ರಮುಖವಾಗಿ ಸಿಬಿಐ ಡೈರೆಕ್ಟರ್ ಪ್ರವೀಣ್ ಸೂದ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು, ಕೆಲವು ಕೇಂದ್ರ ನಾಯಕರುಗಳು ತನಿಖೆಯಲ್ಲಿ ಸಿಲುಕುವ ಸಾಧ್ಯತೆಯಿದೆ. ಬಿಟ್ ಕಾಯಿನ್ ಹಗರಣದಲ್ಲಿ ಶ್ರೀಕಿ ಕೇವಲ ಇನ್ಸ್ಟ್ರೂಮೆಂಟ್ ಆಗಿ ಬಳಕೆ ಆಗಿದ್ದು, ತನ್ನ ಬುದ್ಧಿವಂತಿಕೆಯನ್ನು ಬಿಜೆಪಿ ನಾಯಕರು, ಪೊಲೀಸ್ ಅಧಿಕಾರಿಗಳಿಗಾಗಿ ಬಳಸಿದ್ದಾನೆ ಅನ್ನೋದು ಗೊತ್ತಾಗ್ತಿದೆ. ಇದೇ ಕಾರಣಕ್ಕೆ ಶ್ರೀಕಿಯನ್ನು ಗುರಿಯಾಗಿಸಿ ತನಿಖೆ ಮಾಡಿ, ಲಾಭ ಪಡೆದಿರುವ ಘಟಾನುಘಟಿ ನಾಯಕರನ್ನು ಖೆಡ್ಡಕ್ಕೆ ಕೆಡವಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸುವ ಗುರಿ ಹೊಂದಲಾಗಿದೆ. ಶ್ರೀಕಿಯನ್ನು ಬಳಸಿಕೊಂಡು ಕೋಟಿ ಕೋಟಿ ಕಮಾಯಿ ಮಾಡಿದವರಿಗೆ ನಡುಕ ಶುರುವಾಗಿದೆ.

Leave a Comment

Your email address will not be published. Required fields are marked *