Ad Widget .

80Km ಮೈಲೇಜ್ ಇರುವ ಹೀರೋ ಬೈಕ್ ಕೊಳ್ಳಲು ಹಾತೊರೆಯುತ್ತಿರುವ ಜನ! | ಇದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಸಾಕಷ್ಟು ವರ್ಷಗಳಿಂದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ (Hero Motocorp) ಸಂಸ್ಥೆಯ ಒಂದು ದ್ವಿಚಕ್ರ ವಾಹನ ತನ್ನ ಮಾರುಕಟ್ಟೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಬಜೆಟ್ ಹಾಗೂ ಮೈಲೇಜ್ ವಿಚಾರಕ್ಕೆ ಬಂದರೆ ಈ ಬೈಕಿನ ಮುಂದೆ ನಿಲ್ಲುವರು ಯಾರು ಇಲ್ಲ.

Ad Widget . Ad Widget .

ದಿನನಿತ್ಯದ ಪ್ರಯಾಣಕ್ಕೆ ವಾಹನವನ್ನು ಬಳಸುವ ಪ್ರತಿಯೊಬ್ಬರ ಫೇವರೆಟ್ ಬೈಕ್ ಇದಾಗಿದೆ. ಇದರ ಹೆಸರು ಹೇಳಿ ವಿವರಿಸಬೇಕಾದ ಅಗತ್ಯವಿಲ್ಲ. ಅದು Hero Splendor ಹೊರತು ಬೇರಾವುದಲ್ಲ. ಹೀರೋ ಸಂಸ್ಥೆಯ ಪ್ರತಿಯೊಂದು ಸೆಗ್ಮೆಂಟ್ ನಲ್ಲಿ ಕೂಡ ಬೈಕ್ ಹಾಗೂ ಸ್ಕೂಟರ್ ಗಳನ್ನು ಹೊಂದಿದೆ. ಆದರೆ ಅದರ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಬೈಕ್ Hero Splendor ಆಗಿದೆ. ಬಜೆಟ್ ಮೈಲೇಜ್ ಹಾಗೂ ಹಗುರವಾದ ತೂಕದ ಬೈಕ್ ಇದಾಗಿದೆ.

Ad Widget . Ad Widget .

ಹೊಸ ಸ್ಪ್ಲೆಂಡರ್ ಬೈಕ್ ಮಾರುಕಟ್ಟೆಗೆ ವಿಶೇಷ ಫೀಚರ್ಸ್ ಗಳ ಜೊತೆಗೆ ಕಾಲಿಟ್ಟಿದ್ದು 80 ಕಿಲೋಮೀಟರ್ ಮೈಲೇಜ್ ಜೊತೆಗೆ ಬಜೆಟ್ ನಲ್ಲಿ ಕೂಡ ಲಭ್ಯವಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ಪೂರ್ತಿ ಪ್ರಮಾಣದ ಹಣ ನೀಡಿ ನಿಮಗೆ ಖರೀದಿಸಲು ಸಾಧ್ಯವಾಗದೆ ಹೋದಲ್ಲಿ ಕೇವಲ 11,000 ರೂಪಾಯಿ ಡೌನ್ ಪೇಮೆಂಟ್ ಮಾಡುವ ಮೂಲಕವೂ ಕೂಡ ಇದನ್ನು ಖರೀದಿಸಬಹುದಾಗಿದೆ. ಕಳೆದ ಮೇ ತಿಂಗಳಿನಲ್ಲಿ ಇದು ಭರ್ಜರಿ 3.4 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಿದೆ. ಹೊಸದಾಗಿ ಮಾರುಕಟ್ಟೆಗೆ ಬಂದಿರುವ Hero Splendor + ಬೈಕ್ ಅನ್ನು 89,877 ರೂಪಾಯಿ ಆನ್ ರೋಡ್ ಬೆಲೆಗೆ ಮಾರಾಟ ಮಾಡುತ್ತಿದೆ.

Leave a Comment

Your email address will not be published. Required fields are marked *