Ad Widget .

ಸೌಜನ್ಯ ಅತ್ಯಾಚಾರ ಪ್ರಕರಣ| ನ್ಯಾಯಕ್ಕಾಗಿ ಕಾನತ್ತೂರು, ಧರ್ಮಸ್ಥಳದ ಕಾರಣಿಕ ಶಕ್ತಿಗಳಿಗೆ ಹರಕೆ ಹೊತ್ತ ವಿಠಲ ಗೌಡ

ಸಮಗ್ರ ನ್ಯೂಸ್: ಧರ್ಮಸ್ಥಳದ ಸಮೀಪ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.

Ad Widget . Ad Widget .

ಸಿಬಿಐ ವಿಶೇಷ ಕೋರ್ಟ್‌ ನಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಎದ್ದಿದೆ. ಈ ನಡುವೆಯೇ ಸೌಜನ್ಯಳ ಮಾವ ಇದೀಗ ದೈವ ದೇವರಿಗೆ ಹರಕೆ ಹೊತ್ತಿರುವುದು ಸುದ್ದಿಯಾಗಿದ್ದು, ಕೊಲೆಗೆ ಕಾರಣವಾದ ಅಪರಾಧಿಗಳಿಗೆ ಇನ್ನು ಆರು ತಿಂಗಳ ಒಳಗಾಗಿ ಸರಿಯಾದ ಶಿಕ್ಷೆಯಾಗಬೇಕು ಎಂದು ವಿಠಲ ಗೌಡ ಹರಕೆ ಹೊತ್ತಿದ್ದಾರೆ.

Ad Widget . Ad Widget .

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಠಲ ಗೌಡ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಸೌಜನ್ಯ ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಶಿಕ್ಷೆಯಾದರೆ ಕಾನತ್ತೂರು ದೈವಗಳಿಗೆ ಬಂಗಾರ ನಾಲಿಗೆ, 1 ದಿನದ ನೇಮ ನೀಡುತ್ತೇವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಬೆಳ್ಳಿ ರಥ, ಅಣ್ಣಪ್ಪನಿಗೆ ಬಂಗಾರದ ಕಡಸಾಲೆ ಹರಕೆಯಾಗಿ ಒಪ್ಪಿಸುವುದಾಗಿ ತಿಳಿಸಿದ್ದಾರೆ.

ಸೌಜನ್ಯ ಹತ್ಯೆ ಪ್ರಕರಣ ಹನ್ನೊಂದು ವರ್ಷದ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದ ಕಾಡಿನಲ್ಲಿ ಬೆಳಕಿಗೆ ಬಂದಿತ್ತು. ಭೀಕರ ಅತ್ಯಾಚಾರಕ್ಕೀಡಾಗಿ ಸೌಜನ್ಯಳನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಆರೋಪಿ ಎಂದು ಬಂಧಿಸಲಾಗಿತ್ತು. ಹನ್ನೊಂದು ವರ್ಷದ ನಂತರ ಆತ ನಿರಪರಾಧಿ ಎಂದು ಕೋರ್ಟ್ ಬಿಡುಗಡೆ ಮಾಡಿದೆ. ಹಾಗಾದರೆ ಅಪರಾಧಿ ಯಾರು ಅನ್ನುವ ಪ್ರಶ್ನೆ ಇದೀಗ ಎದ್ದಿದೆ. ಸೌಜನ್ಯ ಹತ್ಯೆ ನಡೆಸಿದವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಜನ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Leave a Comment

Your email address will not be published. Required fields are marked *