ಪುತ್ತೂರು: ಅಪಘಾತದಲ್ಲಿ ಪುತ್ರ ಗಂಭೀರ|ತಾಯಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಮಗ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಬೆನ್ನಲ್ಲೇ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫುರುಷರಕಟ್ಟೆಯ ಇಂದಿರಾನಗರದಲ್ಲಿ ಬೆಳಕಿಗೆ ಬಂದಿದೆ.

Ad Widget ... ..

ಇಂದಿರಾನಗರದ ದಿ.ಪ್ರವೀಣ್‌ ಅವರ ಪತ್ನಿ ಕಾವ್ಯಾ(38) ಆತ್ಮಹತ್ಯೆ ಮಾಡಿಕೊಂಡವರು. 7ವರ್ಷದ ಹಿಂದೆ ಕಾವ್ಯಾ ಅವರ ಪತಿ ಪ್ರವೀಣ್‌ ಕೂಡ ಯಾವುದೋ ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಸ್ಥಳದಲ್ಲಿ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad Widget

ಇನ್ನು ಕಾವ್ಯಾ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದ್ದು, ಅವರ ಪುತ್ರ ಪ್ರತೀಕ್‌ ಜೂ 30 ರಂದು ಬೆದ್ರಾಳ ಸಮೀಷ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನೋವಿನಲ್ಲಿದ್ದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *