SSLC ವಿದ್ಯಾರ್ಥಿಗಳೇ ನಿಮಗೊಂದು ಮುಖ್ಯವಾದ ಮಾಹಿತಿ| ಪೂರಕ ಪರೀಕ್ಷೆಯ ಸ್ಕ್ಯಾನ್ಡ್‌ ಪ್ರತಿ ಬಗ್ಗೆ ಇಲ್ಲಿದೆ ವಿವರ

ಸಮಗ್ರ ನ್ಯೂಸ್ : ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಈಗ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿಯೊಂದನ್ನು ವಿದ್ಯಾರ್ಥಿಗಳಿಗೆ ನೀಡಿದ್ದು, ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ , ಮರುಎಣಿಕೆಗೆ ಅರ್ಜಿಯನ್ನು ಆಹ್ವಾನಿಸಿದೆ.‌

Ad Widget ... ..

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಸ್ಕ್ಯಾನ್ಡ್‌ ಪ್ರತಿ, ಮರು ಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು https://kseab.karnataka.gov.in ಈ ಲಿಂಕ್‌ ಮೂಲಕ ಭೇಟಿ ನೀಡಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-07-2023 ಆಗಿರುತ್ತದೆ. ಉತ್ತರ ಪತ್ರಿಕೆಗಳ ಮರಎಣಿಕೆಗೆ ಅರ್ಜಿ ಸಲ್ಲಿಸಲು ದಿನಾಂಕ 04-07-2023 ರಿಂದ 10-07-2023 ರವರೆಗೆ ಇರುತ್ತದೆ.

Ad Widget

ಆನ್‌ಲೈನ್‌ ಮೂಲಕ ಸ್ಕ್ಯಾನ್ಡ್‌ ಪ್ರತಿ ಪಡೆಯಲು ಒಂದು ಸಬ್ಜೆಕ್ಟ್‌ಗೆ ರೂ.410, ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ ರೂ.420 ಆಗುತ್ತದೆ. ಹಾಗೆನೇ ಮರುಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ ರೂ.810 ಆನ್‌ಲೈನ್‌ ಮೂಲಕ, ರೂ.820 ಆಫ್‌ ಲೈನ್‌ ಮೂಲಕ ಪಾವತಿ ಮಾಡಬೇಕಾಗುತ್ತದೆ.

Leave a Comment

Your email address will not be published. Required fields are marked *