ಗಾಯಕ ಎಚ್ ಭೀಮರಾವ್ ವಾಷ್ಠರ್ ನೇತೃತ್ವದಲ್ಲಿ ಹಾಡು ಕೋಗಿಲೆ-2023 ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ ಸಮಾರಂಭ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ಹಾಡು ಕೋಗಿಲೆ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆಯು ಇತ್ತೀಚಿಗೆ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನೆರವೇರಿತು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು , ಗಾಯಕರು ಮತ್ತು ಖ್ಯಾತ ಜ್ಯೋತಿಷ್ಯರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು . ಗಾಯಕರು ಹಾಗೂ ಪೊಲೀಸ್ ಅಧಿಕಾರಿಯಾದ ಶ್ರೀ ಸುಬ್ರಾಯ ಕಲ್ಪನೆ ಯವರು ಕರೋಕೆ ಸಂಗೀತ ಸ್ಪರ್ಧೆಯನ್ನು ಉದ್ಘಾಟಿಸಿದರು.

Ad Widget ... ..

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ರವರು ಗಾಯಕ ಮತ್ತು ಖ್ಯಾತ ಜ್ಯೋತಿಷ್ಯರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ಬರೆದು ಹಾಡಿದ್ದ ಧರೆಗಿಳಿದ ರತಿದೇವಿ ಭಾವಗೀತೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು . ಶಾಸಕರಾದ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ಮುತ್ತು ಕೃಷಿಯ ಖ್ಯಾತ ಕೃಷಿಕರಾದ ನವೀನ ಚಾತುಬಾಯಿಯವರು ಮುಖ್ಯ ಅತಿಥಿಗಳಾಗಿದ್ದರು . ಬೆಂಗಳೂರಿನ ಖ್ಯಾತ ಗಾಯಕರಾದ ಪ್ರಕಾಶ್ ಪಾವಂಜೆ ಮತ್ತು ಕಬಕದ ಕರುನಾಡ ಗಾನಗಂಧರ್ವ ಬಿರುದಾಂಕಿತ ಮಿಥುನ್ ರಾಜ್ ವಿದ್ಯಾಪುರ ಅವರು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

Ad Widget

ಇದೇ ಸಂದರ್ಭದಲ್ಲಿ ಖ್ಯಾತ ಗಾಯಕರಾದ ರವಿ ಪಾಂಬಾರ್ , ವಸಂತ್ ಕೇಪು ವಿಟ್ಲ , ವಸಂತ್ ಬಾರಡ್ಕ ಮತ್ತು ಶಶಿ ಗಿರಿವನ ಕಡಬ ಅವರಿಗೆ ರಾಜ್ಯಮಟ್ಟದ ಸಂಗೀತ ರತ್ನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಖ್ಯಾತ ಗಾಯಕರಾದ ಪ್ರಕಾಶ್ ಪಾವಂಜೆ ಅವರಿಗೆ ಕರುನಾಡ ಸಂಗೀತ ಮಾಂತ್ರಿಕ ಬಿರುದು ನೀಡಿ ಸನ್ಮಾನಿಸಲಾಯಿತು.

ಹಾಡು ಕೋಗಿಲೆ -2023 ಕರೋಕೆ ಸಂಗೀತ ಸ್ಪರ್ಧೆಯಲ್ಲಿ 6 ಜಿಲ್ಲೆಗಳಿಂದ ಒಟ್ಟು 38 ಜನ ಗಾಯಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು . ಸುಧಾ ಕೋಟೆ ಪಂಜ ಅವರು ವಿನ್ನರ್ ಆಗಿ ಮೂಡಿಬಂದರು. ತನ್ಮಯ್ ಸೋಮಯಾಗಿ ಮತ್ತು ಆರಾಧ್ಯ ಮುಂಡೂರು ಪುತ್ತೂರು ರವರು ರನ್ನರ್ ಆಗಿ ಮೂಡಿಬಂದರು. ಅಶ್ವಿಜ್ ಆತ್ರೇಯ ಮತ್ತು ಪ್ರಕಾಶ್ ಕಿನ್ನಿಗೋಳಿ ಮೂರನೆಯ ಬಹುಮಾನ ಪಡೆದುಕೊಂಡರು.

ಯಜೀಶ್ ಮಂಜೆಶ್ವರ್ , ಹರಿಪ್ರಸಾದ್ ಸುರತ್ಕಲ್ , ಅರ್ಪಿತಾ ಮುಳ್ಳೇರಿಯಾ , ಕಾವ್ಯ ಕೆ ವಿ ಕಾಸರಗೋಡು , ಭವ್ಯಾ ಭಾಗಮಂಡಲ , ಮಹೇಶ್ ಪೈ ಸುಳ್ಯ , ಪೂಜಾಶ್ರೀ ಬಳ್ಳಡ್ಕ ಸುಳ್ಯ, ಪ್ರಸಾದ್ ಬೆಳುವಾಯಿ , ಹರ್ಷಿತಾ ಸುಳ್ಯ , ವಂದನಾ ಮಂಗಳೂರು ರವರು ಸೂಪರ್ ಸ್ಟಾರ್ ಆಫ್ ಸಿಂಗರ್ ಅವಾರ್ಡ್ ಪಡೆದುಕೊಂಡರು . ಸ್ಪರ್ಧೆಯಲ್ಲಿ ಶಿವಪ್ರಸಾದ್ ಶೆಟ್ಟಿ ಪುತ್ತಿಗೆ , ವಿಶ್ವನಾಥ್ ಪುತ್ತಿಗೆ , ಪೆರುಮಾಳ್ ಲಕ್ಷ್ಮಣ್ , ಪುಷ್ಪಾ ಎಡಮಂಗಲ , ಸಂದೀಪ್ ಸುಳ್ಯ, ಕಾವೇರಿ ಸೋಮವಾರಪೇಟೆ , ಮಹೇಶ್ ಮಂಜೆಶ್ವರ್ , ಮಮತಾ ಮಡಿಕೇರಿ , ಉಷಾ ಮಂಗಳೂರು , ಸಂಗೀತಾ ಶೆಟ್ಟಿ ಕಾಸರಗೋಡು , ಮೌಲ್ಯ ಮಾಜಿಕೋಡಿ , ಪ್ರವೀಣ್ ಡಿ ದೇವ , ಸುರೇಶ ಕುಮಾರ್ ಚಾರ್ವಾಕ , ಜಯರಾಜ್ ಕೆ ಮಂಗಳೂರು , ಪ್ರವೀಣ್ ಕುಮಾರ್ ಪುತ್ತಿಗೆ , ನವೀನ ಉಪ್ಪಿನಂಗಡಿ ಇನ್ನಿತರರು ಭಾಗವಹಿಸಿದ್ದರು. ಕವಯಿತ್ರಿ ಪೂರ್ಣಿಮಾ ಪೆರ್ಲಂಪಾಡಿ ರವರು ಸರ್ವರನ್ನು ಸ್ವಾಗತಿಸಿದರು . ಗಾಯಕ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ವಂದಿಸಿದರು

ಭಾಗವಹಿಸಿದ ಎಲ್ಲಾ ಆಕರ್ಷಕ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು . ಬಿ ಪ್ರಜ್ವಲ್ ವಾಷ್ಠರ್ ಸಹಕರಿಸಿದರು .

Leave a Comment

Your email address will not be published. Required fields are marked *