Ad Widget .

ಮಡಿಕೇರಿ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ದೇವರಾಜ್ ಅಮಾನತು

ಸಮಗ್ರ ನ್ಯೂಸ್: ಮಡಿಕೇರಿ ಲೋಕೋಪಯೋಗಿ ಉಪವಿಭಾಗದ ಕಿರಿಯ ಇಂಜಿನಿಯರ್ ದೇವರಾಜು ಕೆ.ಎಲ್ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಇವರನ್ನು ಕೂಡಲೇ ಅಮಾನತ್ತುಗೊಳಸಲು ಆದೇಶ ಹೊರಡಿಸುವಂತೆ ಹಾಗೂ ಇವರ ವಿರುದ್ಧ ಶಿಸ್ತುಕ್ರಮ ಹೊರಡಿಸಿವಂತೆ ಆದೇಶ ನೀಡಲಾಗಿದೆ.

Ad Widget . Ad Widget .

ದೇವರಾಜು ಕೆ.ಎಲ್. ಕೊಡಗು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ತಡೆಗೋಡೆಯ ಕಳಪೆ ಕಾಮಗಾರಿ ನಿರ್ವಹಣೆ, ಗ್ರೇಟರ್ ರಾಜ ಸೀಟ್ ಯೋಜನೆಯಲ್ಲಿ ನಕಲಿ ಎಂ.ಬಿ. ಪುಸ್ತಕಗಳ ಬಳಕೆ ಹಾಗೂ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲ ಎಸ್.ಸಿ ಕಾಲೋನಿಯಲ್ಲಿ ಎಸ್ಇಪಿ/ಟಿ.ಎಸ್.ಪಿ ಅನುದಾನವನ್ನು ಬೇರೆಡೆ ನಿರ್ವಹಿಸಿರುವುದಲ್ಲದೇ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

Ad Widget . Ad Widget .

ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತಡೆ-ಗೋಡೆ ಕಳಪೆ ಕಾಮಗಾರಿ ವಿಚಾರವಾಗಿ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಸತತವಾಗಿ ಹೋರಾಟ ನಡೆಸಿದ್ದರು. ಮಡಿಕೇರಿ ಶಾಸಕ ಎ.ಎಸ್. ಪೊನ್ನಣ್ಣ ಸೂಚನೆ ಮೇರೆಗೆ ಇದೀಗ ಸರಕಾರದಿಂದ ದೇವರಾಜ್ ಅವರನ್ನು ಅಮಾನತು ಮಾಡುವಂತೆ ಆದೇಶ ಜಾರಿ ಮಾಡಲಾಗಿದೆ.

Leave a Comment

Your email address will not be published. Required fields are marked *