ಚಲಿಸುತ್ತಿರುವ ಬಸ್ ನಲ್ಲೇ ಸೆಕ್ಸ್ ನಲ್ಲಿ ತೊಡಗಿದ ಕಂಡಕ್ಟರ್ ಮತ್ತು ಮತ್ತೊಬ್ಬಾಕೆ!! ಹಿಂಬದಿ ಸೀಟ್ ನಲ್ಲಿ ನಡೀತಾ ಇತ್ತು ರಾಸಲೀಲೆ…

ಸಮಗ್ರ ನ್ಯೂಸ್: ಚಲಿಸುತ್ತಿರುವ ಬಸ್ಸಿನಲ್ಲೇ ಕಂಡಕ್ಟರ್ ಯೊಬ್ಬ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಲಕ್ನೋಗೆ ತೆರಳುತ್ತಿದ್ದ ಹತ್ರಾಸ್ ಡಿಪೋದ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಂಡಕ್ಟರ್ ಬಸ್‌ ಹಿಂಬದಿ ಸೀಟಿನಲ್ಲಿ ಕುಳಿತಿರುವುದನ್ನು ಪ್ರಯಾಣಿಕರೊಬ್ಬರು ನೋಡಿದ್ದಾರೆ.

Ad Widget ... ..

ಕಂಡಕ್ಟರ್ ವರ್ತನೆ ವಿಚಿತ್ರವಾಗಿ ಕಾಣುತ್ತಿದ್ದರಿಂದ ಪ್ರಯಾಣಿರೊಬ್ಬರು ಮೊಬೈಲ್‌ ನಲ್ಲಿ ಇದನ್ನು ಚಿತ್ರೀಕರಣ ಮಾಡುತ್ತಾ ಹೋಗಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಂಬಳಿಯೊಳಗೆ ಮಹಿಳೆಯೊಬ್ಬರೊಂದಿಗೆ ಕಂಡಕ್ಟರ್ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Ad Widget

ಪ್ರಯಾಣಿಕ ವಿಡಿಯೋ ಮಾಡುತ್ತಿರುವಾಗಲೇ ಕಂಡಕ್ಟರ್ ಎಚ್ಚೆತ್ತುಕೊಂಡು ಕಂಬಳಿಯಿಂದ ಮಾನ ಮುಚ್ಚಿಕೊಂಡು ಗೊಂದಲಕ್ಕೆ ಒಳಗಾಗಿದ್ದಾನೆ. ಇದನ್ನು ನೋಡಿದ ಇತರ ಪ್ರಯಾಣಿಕರು ದುರ್ವರ್ತನೆ ಬಗ್ಗೆ ಕಂಡಕ್ಟರ್‌ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಘಟನೆ 10 ದಿನಗಳ ಹಿಂದೆ ನಡೆದಿದೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಈ ಘಟನೆ ಆನ್‌ಲೈನ್‌ನಲ್ಲಿ ವೈರಲ್‌ ಆದ ಬಳಿಕ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, (ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ), ತ್ವರಿತ ಕ್ರಮ ಕೈಗೊಂಡು ಘಟನೆಯಲ್ಲಿ ಚಾಲಕ ಮತ್ತು ಕಂಡಕ್ಟರ್‌ ಇಬ್ಬರು ಶಾಮೀಲು ಆಗಿದ್ದು, ಚಾಲಕ ಮತ್ತು ಕಂಡಕ್ಟರ್‌ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *